ಕಲಬುರಗಿ: ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ತರುವ ನಿಟ್ಟಿನಲ್ಲಿ ಮುಂದಿನ ದಿನಳಲ್ಲಿ ಉತ್ತರ ಕರ್ನಾಟಕದಿಂದ ಸಿಎಂ ಬಸವರಾಜ ಬೊಮ್ಮಾಯಿ, ನಾನು ಮೈಸೂರಿನಿಂದ ರಥಯಾತ್ರೆ ಶುರು ಮಾಡಿ ದಾವಣಗೆರೆಯಲ್ಲಿ 8ಲಕ್ಷ ಜನ ಸೇರಿಸಿ ಬೃಹತ್ ಶಕ್ತಿ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಬಿಜೆಪಿ ಹಿಂದುಳಿದ ವರ್ಗಗಳ ವಿರಾಟ್ ಸಮಾವೇಶ ಉದ್ದೇಶಿಸಿ ಮಾತನಾಡಿ, ಎಲ್ಲ ಕಡೆ ತಿರುಗಾಡಿ ಪಕ್ಷ ಬಲಪಡಿಸಲಾಗುವುದು. ಹೀಗಾಗಿ ಹಿಂದುಳಿದ ವರ್ಗದವರು ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಬಲಪಡಿಸಬೇಕೆಂದರು. ದೇಶದಲ್ಲಿ ಎರಡು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ. ಆದರೆ ಬಿಜೆಪಿ ದೇಶದುದ್ದಕ್ಕೂ ಅಧಿಕಾರದಲ್ಲಿದೆ. ಹೀಗಾಗಿ ಹಣಬಲ- ತೊಳ್ಬಲದಿಂದ ಮತ್ತು ಜಾತಿ ವಿಷ ಬೀಜ ಬಿತ್ತಿ ಅಧಿಕಾರ ಪಡೆಯಲು ಹವಣಿಸುತ್ತಿರುವ ಕಾಂಗ್ರೆಸ್ಗೆ ತಕ್ಕ ಉತ್ತರ ನೀಡಿ ಎಂದು ಬಿಎಸ್ ವೈ ಕರೆ ನೀಡಿದರು.



