ದಾವಣಗೆರೆ: 2023ರ ಏಪ್ರಿಲ್ ನಲ್ಲಿ ನಡೆಯುವ 10ನೇ ತರಗತಿ (SSLC) ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ.ಏಪ್ರಿಲ್ 1ರಿಂದ 15ರವರೆಗೆ ಪರೀಕ್ಷೆಗಳು ನಡೆಯಲಿದ್ದು, ತಾತ್ಕಾಲಿಕ ವೇಳಾಪಟ್ಟಿಗೆ ವಿದ್ಯಾರ್ಥಿಗಳು, ಪೋಷಕರಿಗೆ ಆಕ್ಷೇಪಣೆ ಸಲ್ಲಿಸಲು ನವೆಂಬರ್ 28 ಕೊನೆ ದಿನವಾಗಿದೆ.
ತಾತ್ಕಾಲಿಕ ವೇಳಾಪಟ್ಟಿ ವಿವರ: ಏಪ್ರಿಲ್ 1 ಪ್ರಥಮ ಭಾಷೆ, ಏಪ್ರಿಲ್ 4 ಗಣಿತ, ಸಮಾಜಶಾಸ್ತ್ರ, ಏಪ್ರಿಲ್ 6 ದ್ವಿತೀಯ ಭಾಷೆ, ಏಪ್ರಿಲ್ 8 ಅರ್ಥಶಾಸ್ತ್ರ, ಏಪ್ರಿಲ್ 10 ವಿಜ್ಞಾನ, ರಾಜ್ಯಶಾಸ್ತ್ರ, ಹಿಂದುಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಏಪ್ರಿಲ್ 12 ತೃತೀಯ ಭಾಷೆ, ಏಪ್ರಿಲ್ 15 ಸಮಾಜ ವಿಜ್ಞಾನ.



