ದಾವಣಗೆರೆ: ನಗರದ ದೇವರಾಜ್ ಅರಸ್ ಬಡಾವಣೆಯ ‘ಸಿ’ ಬ್ಲಾಕ್ ಮನೆಯೊಂದರಲ್ಲಿ ಇಂಟರ್ ಲಾಕ್ ಮುರಿದು 5 ಲಕ್ಷ ಮೌಲ್ಯದ ಚಿನ್ನಾಭರಣ, 8 ಸಾವಿರ ನಗದು ಕಳ್ಳತನ ಮಾಡಿದ್ದ ಆರೋಪಿಯನ್ನು ಕೇವಲ 8 ಗಂಟೆಯಲ್ಲಿಯೇ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಅ.28 ರಂದು ಬೆಳಗ್ಗೆ ದೇವರಾಜ್ ಅರಸ್ ಬಡಾವಣೆಯ ಸಿ ಬ್ಲಾಕ್ ನ ಶಾಂತಕುಮಾರ್ ಅವರು, ನಮ್ಮ ಮನೆಯ ಅಲ್ಮೇರಾ ಇಂಟರ್ ಲಾಕ್ ತೆಗೆದು ಅದರಲ್ಲಿದ್ದ 5,13000 ರೂ. ಮೌಲ್ಯದ 125 ಗ್ರಾಂ ಬಂಗಾರ, 8 ಸಾವಿರ ನಗದು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಆರೋಪಿಯನ್ನು ಡಿವೈಎಸ್ಪಿ ಬಸವರಾಜ್ ಬಿ.ಎಸ್ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಗುರುಬಸವರಾಜ್ ನೇತೃತ್ವದ ತಂಡ ಕೇವಲ 8 ಗಂಟೆಯಲ್ಲಿ ಬಂಧಿಸಲಾಗಿದೆ. ಆರೋಪಿ ಆಟೋ ಚಾಲಕ ಅವಿನಾಶ್ (30) ಬಂಧಿಸಲಾಗಿದೆ.
ಆರೋಪಿಯಿಂದ 110 ಗ್ರಾಂ ಚಿನ್ನ, 33 ಗ್ರಾಂ ಬೆಳ್ಳಿ ಹಾಗೂ 2, 910 ನಗದು ವಶಕ್ಕೆ ಪಡೆಯಲಾಗಿದೆ. ಈ ಆರೋಪಿ ಈ ಹಿಂದೆ ಬೆಂಗಳೂರು ನಗರದಲ್ಲಿ ಪ್ರಕರಣವೊಂದು ದಾಖಲಾದ ಬಗ್ಗೆ ವಿಚಾರಣೆ ನಡೆಯುತ್ತಿದೆ. ಆರೋಪಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಎಸ್ ಪಿ ರಿಷ್ಯಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



