ಶಿವಮೊಗ್ಗ; ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಹಾಲು ಉತ್ಪಾದಕ ರೈತರಿಗೆ ಶಿವಮೊಗ್ಗ ಹಾಲು ಒಕ್ಕೂಟ( ಶಿಮುಲ್ ) ಸಿಹಿ ಸುದ್ದಿ ನೀಡಿದೆ. ರೈತರಿಂದ ಖರೀದಿಸುವ ಹಾಲಿನ ದರವನ್ನು ಪ್ರತಿ ಲೀಟರ್ ಗೆ 2 ರೂಪಾಯಿ ಹೆಚ್ಚಳ ಮಾಡಲು ನಿರ್ಧರಿಸಿದೆ.
ಶಿಮುಲ್ ವ್ಯಾಪ್ತಿಯ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗದ ಹಾಲು ಉತ್ಪಾದಕ ರೈತರಿತರಿಗೆ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಅಂಗವಾಗಿ ಈ ಕೊಡುಗೆ ನೀಡಲಾಗಿದೆ. ನವೆಂಬರ್ 1 ರಿಂದ ಈ ದರ ಜಾರಿಗೆ ಬರಲಿದೆ. ಆಡಳಿತ ಮಂಡಳಿ ಸಭೆಯಲ್ಲಿ ದರ ಏರಿಕೆ ನಿರ್ಧಾರ ಕೈಗೊಳ್ಳಲಾಗಿದೆ.
ಈ ದರ ಏರಿಕೆಯಿಂದ ಒಕ್ಕೂಟದಿಂದ ಸಂಘಗಳಿಗೆ ಕೊಡುವ ದರ 30.06 ರೂಪಾಯಿಗಳಿಂದ 32.06 ರೂ.ಗೆ ಹಾಗೂ ಸಂಘದಿಂದ ರೈತರಿಗೆ 28.20 ರೂ.ಗಳಿಂದ 30.20 ರೂ.ಗೆ ಏರಿಕೆ ಮಾಡಲಾಗಿದೆ. ರೈತರಿಂದ ಖರೀದಿಸುವ ದರ ಏರಿಕೆ ಮಾಡಿದರೂ ಗ್ರಾಹಕರು ಖರೀದಿಸುವ ದರದಲ್ಲಿ ಯಾವುದೇ ಏರಿಕೆ ಮಾಡಿಲ್ಲ.



