ದಾವಣಗೆರೆ: ಅಡಿಕೆ ಕೊಯ್ಯುವಾಗ ದೋಟಿಗೆ ವಿದ್ಯುತ್ ತಂತಿ ತಗುಲಿ ಕೂಲಿ ಕಾರ್ಮಿಕ ತೋಟದಲ್ಲಿಯೇ ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಹೋಬಳಿಯ ಹೊಟ್ಯಾಪುರದಲ್ಲಿ ರೈತರೊಬ್ಬರ ಅಡಿಕೆ ತೋಟದಲ್ಲಿ ಈ ಘಟನೆ ನಡೆದಿದೆ. ಈ ದುರಂತದಲ್ಲಿ ಚನ್ನಮುಂಬಾಪುರ ಗ್ರಾಮದ ಸಿಕಾಮಣಿ(35) ಮೃತ ದುರ್ದೈವಿ ಆಗಿದ್ದಾರೆ. ರೈತ ಶಿವಲಿಂಗಪ್ಪ ಅಡಿಕೆ ತೋಟದಲ್ಲಿ ಅಡಿಕೆ ಕೊಯ್ಲು ಮಾಡುವ ವೇಳೆ ಈ ದುರ್ಘಟನೆ ನಡೆದಿದೆ. ಮೃತ ಯುವಕ ಸಿಕಾಮಣಿ ಅಡಿಕೆ ಕೊಯ್ಲು ಮಾಡುತ್ತಿರುವಾಗ ಅಡಿಕೆ ದೋಟಿಗೆ ವಿದ್ಯುತ್ ತಂತಿ ತಗುಲಿದೆ. ಇದರಿಂದ ಬಿಡಿಸಿಕೊಳ್ಳಲಾಗದೆ ಸಿಕಾಮಣಿ ತೋಟದಲ್ಲಿಯೇ ಮೃತಪಟ್ಟಿದ್ದಾನೆ.ಈ ಸಂಬಂಧ ಸಾಸ್ವೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಿಹಾರ ಕೊಡುವಂತೆ ಜಮೀನಿನ ಮಾಲೀಕರಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.