ಡಿವಿಜಿ ಸುದ್ದಿ, ಹರಪನಹಳ್ಳಿ: ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಪುತ್ರ ಪಿ.ಟಿ.ಭರತ್ ರೈತರ ಮೇಲೆ ಹಲ್ಲೆ ನಡೆಸಿ ಗೂಂಡಾಗಿರಿ ವರ್ತನೆ ತೋರಿದ್ದಾನೆ.
ತಾಲ್ಲೂಕಿನ ಕಂಚೀಕೆರಿ ಗ್ರಾಮದ ಮಾರ್ಗವಾಗಿ ಬಳ್ಳಾರಿಗೆ ಹೋಗುವ ರಸ್ತೆಯಲ್ಲಿ ಪಿ.ಟಿ.ಪರಮೇಶ್ವರ ನಾಯ್ಕ ಒಡೆತನದ ಸ್ಟೋನ್ ಕ್ರಷರ್ ಇದ್ದು, ಈ ಕ್ರಷರ್ ನಿಂದ ಉಂಟಾಗುವ ಬೆಳೆಹಾನಿ ಪ್ರಶ್ನಿಸಿದ ಮಹಿಳೆ ಮತ್ತು ಮಕ್ಕಳ ಮೇಲೆ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ ಪುತ್ರ, ಲಕ್ಷಿಪುರ ಗ್ರಾ. ಪಂ ಅಧ್ಯಕ್ಷ ಪಿ.ಟಿ.ಭರತ ಮತ್ತು ಬೆಂಬಲಿಗರಿಂದ ಹಲ್ಲೆ ನಡೆದಿದೆ.
ಗುರುವಾರ ಮಧ್ಯಾಹ್ನ 2 ಗಂಟೆಗೆ ನಡೆದ ಘಟನೆ ನಡೆದಿದ್ದು, ಗಾಯಾಳುಗಳು ಹರಪನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.