ದಾವಣಗೆರೆ: ಚೆಕ್ ಡ್ಯಾಂ ನಲ್ಲಿ ಈಜಲು ಹೋದ ಯುವಕ ನೀರಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಜಗಳೂರು ತಾಲೂಕಿನ ದೇವಪುರ ಗ್ರಾಮದಲ್ಲಿ ನಡೆದಿದೆ.
ಅಭಿಷೇಕ್ (30) ಸಾವನ್ನಪ್ಪಿದ ಯುವಕನಾಗಿದ್ದಾನೆ. ದೇವಪುರ ಗ್ರಾಮದಲ್ಲಿ ಹಳ್ಳಕ್ಕೆ ನಿರ್ಮಿಸಿದ ಚೆಕ್ ಡ್ಯಾಂನಲ್ಲಿ ಅಭಿಷೇಜ್ ತನ್ನ ಇಬ್ಬರು ಸ್ನೇಹಿತರ ಜತೆ ಈಜಲು ಹೋಗಿದ್ದನು. ಸ್ನೇಹಿತರು ಸುರಕ್ಷಿತವಾಗಿ ದಡ ಸೇರಿದ್ದು, ಅಭಿಷೇಕ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.