ದಾವಣಗೆರೆ: ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಲೈಸೆನ್ಸ್ ಪಡೆದು ವ್ಯಾಪಾರ ವಹಿವಾಟು ನಡೆಸುತ್ತಿರುವ ಪೇಟೆ ಕಾರ್ಯಕರ್ತರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಲೀಜ್ ಕಂ ಸೇಲ್ ಆಧಾರದ ಮೇಲೆ ಪಡೆದ ನಿವೇಶನದಲ್ಲಿ ಕಟ್ಟಡ ನಿರ್ಮಿಸಲು ಅಕ್ಟೋಬರ್ 30 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ನಿವೇಶನದಲ್ಲಿ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ಮಾರುಕಟ್ಟೆ ಪ್ರಾಂಗಣದಲ್ಲಿ ಸ್ವತ್ತಿನ ಹಂಚಿಕೆ ನಿಯಂತ್ರಣ) ನಿಯಮಗಳನ್ವಯ ಒಂದು ವರ್ಷದೊಳಗಾಗಿ ಕಟ್ಟಡ ನಿರ್ಮಿಸಿಕೊಳ್ಳತಕ್ಕದ್ದು, ಆದರೆ ಕೆಲವು ಪೇಟೆ ಕಾರ್ಯಕರ್ತರು ಇಲ್ಲಿಯವರೆಗೂ ಹಂಚಿಕೆ ಪಡೆದಿರುವ ನಿವೇಶನದಲ್ಲಿ ಕಟ್ಟಡ ನಿರ್ಮಿಸಿಕೊಂಡಿರುವುದಿಲ್ಲ. ಆದ್ದರಿಂದ ಲೀಜ್ ಕಂ ಸೇಲ್ ಆಧಾರದ ಮೇಲೆ ನಿವೇಶನ ಹಂಚಿಕೆ ಪಡೆದಿರುವ ಪೇಟೆ ಕಾರ್ಯಕರ್ತರುಗಳು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ಮಾರುಕಟ್ಟೆ ಪ್ರಾಂಗಣದಲ್ಲಿ ಸ್ವತ್ತಿನ ಹಂಚಿಕೆ ನಿಯಂತ್ರಣ) ನಿಯಮಗಳನ್ವಯ ನಿಗಧಿತ ಅವಧಿಯೊಳಗೆ ಕಟ್ಟಡ ನಿರ್ಮಿಸಿಕೊಳ್ಳದೇ ಇರುವವರು ಕಟ್ಟಡ ನಿರ್ಮಿಸಿಕೊಳ್ಳಲು ಒಂದು ಬಾರಿ ಆವಕಾಶ ಮಾಡಿಕೊಡಲಾಗಿದೆ. ಕಟ್ಟಡ ನಿರ್ಮಿಸಲು ಇಚ್ಚಿಸುವ ಪೇಟೆ ಕಾರ್ಯಕರ್ತರು ಹಂಚಿಕೆ ಪಡೆದಿರುವ ನಿವೇಶನದಲ್ಲಿ ಕಟ್ಟಡ ನಿರ್ಮಿಸಲು ಅಕ್ಟೋಬರ್ 30 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.



