ದಾವಣಗೆರೆ: ವಾಕಿಂಗ್ ಗೆ ಹೋಗಿದ್ದ ಮಹಿಳೆ ಕೊರಳಲ್ಲಿದ್ದ ಮಾಂಗಲ್ಯ ಸರ ಕಿತ್ಕೊಂಡು ಪರಾರಿಯಾದ ಘಟನೆ ದಾವಣಗೆರೆಯ ಸರಸ್ವತಿ ನಗರದಲ್ಲಿ ನಡೆದಿದೆ.
52 ವರ್ಷದ ಸುಮಂಗಳ ಮಾಂಗಲ್ಯ ಸರ ಕೆಳೆದು ಕೊಂಡ ಮಹಿಳೆಯಾಗಿದ್ದಾರೆ. ಪಕ್ಕದ ಮನೆಯವರ ಜತೆ ಸಂಜೆ ವಾಕಿಂಗ್ ಮಾಡುತ್ತಿದ್ದಾಗ ಹಿಂದಿನಿಂದ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. 45 ಗ್ರಾಂ ತೂಕದ 1.80 ಲಕ್ಷ ಮೌಲ್ಯದ ಮಾಂಗಲ್ಯ ಸರ ಕಳ್ಳತನವಾಗಿದೆ. ಈ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



