ದಾವಣಗೆರೆ: ಬ್ಯಾಂಕ್ ಗಳ ದರೋಡೆಗೆ ಕಾರೊಂದರಲ್ಲಿ ಹೊಂಚು ಹಾಕಿ ಕೂತಿದ್ದ ಅಂತರ್ ಜಿಲ್ಲಾ ಬ್ಯಾಂಕ್ ದರೋಡೆಕೋರರಲ್ಲಿ ಇಬ್ಬರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿನ ವಡ್ಡನಹಳ್ಳಿ ಕ್ರಾಸ್ ನ ಬ್ರೀಡ್ಜ್ ಬಳಿ ಬ್ಯಾಂಕ್ ದರೋಡೆಗೆ ಕಾರೊಂದರಲ್ಲಿ ಹೊಂಚು ಹಾಕಿ ಕತರ್ನಾಕ್ ಗ್ಯಾಂಗ್ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ ಹೊಳಕ್ಕೆರೆ ನಿವಾಸಿಗಳಾದ
ಭತ್ರಪತಿ (33) ಹಾಗೂ ದಾದಫೀರ್ (21) ಬಂಧಿಸಲಾಗಿದೆ. ಕಾರಿನಲ್ಲಿದ್ದ ನಾಲ್ವರು ಪರಾರಿಯಾಗಿದ್ದಾರೆ. ಆರೋಪಿಗಳಿಂದ ಲಾಂಗ್ ಮಚ್ಚು, ಆಕ್ಸಲ್ ಬ್ಲೇಡ್ ಕಟ್ಟರ್, ಕಬ್ಬಿಣದ ರಾಡ್, ಕಟ್ಟಿಂಗ್ ಪ್ಲೇಯರ್, ಟಾರ್ಜ್ , ಕಾರದಪುಡಿ ವಶಕ್ಕೆ ಪಡೆಯಲಾಗಿದೆ.
ಈ ಗ್ಯಾಂಗ್ ಮೇಲೆ ದಾವಣಗೆರೆ ಗ್ರಾಮಾಂತರ ಠಾಣೆಯ 3 , ಹರಿಹರ ಗ್ರಾಮಾಂತರ ಠಾಣೆಯ 1 ಹಾಗೂ ರಾಣೆಬೆನ್ನೂರು ಗ್ರಾಮಾಂತರ ಠಾಣೆಯ 2 ಬ್ಯಾಂಕ್ ಎಟಿಎಂ ದರೋಡೆ ಪ್ರಕರಣ ದಾಖಲಾಗಿವೆ. 8 ಲಕ್ಷ ಮೌಲ್ಯದ ಕಾರನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



