ದಾವಣಗೆರೆ: ದಾವಣಗೆರೆ ಅಡಕೆ ಅಭಿವೃದ್ಧಿ ಪರಿಷ್ಕರಣಾ ಮತ್ತು ಮಾರಾಟ ಸಹಕಾರ ಸಂಘ ಹಾಗೂ ಕುಣಿಗಲ್‌ನ ಟೆಂಡರ್ ಟುಡೇ ಸಂಸ್ಥೆ ಸಹಯೋಗದೊಂದಿಗೆ ಅಡಕೆ ಕೃಷಿ ಯಂತ್ರ ಮೇಳನ್ನು ಸೆ.19, 20ರಂದು ಆಯೋಜಿಸಲಾಗಿದೆ.
ಸಂಘದ ಸಂಸ್ಥಾಪಕ ಅಧ್ಯಕ್ಷ ಎಚ್.ಜಯಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಮೇಳ ನಡೆಯಲಿದೆ. ಅಡಿಕೆ ಕೃಷಿಗೆ ಸಬಂಧಿಸಿದಂತೆ ಯಂತ್ರಗಳ ಪ್ರದರ್ಶನ, ವಿಚಾರಗೋಷ್ಠಿ, ಪ್ರಾತ್ಯಕ್ಷಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರೈತರು ಅಡಿಕೆ ಕೃಷಿಯಲ್ಲಿ ನವ ತಾಂತ್ರಿಕತೆ ಅಳವಡಿಸಿಕೊಳ್ಳಲು ಉಪಯುಕ್ತ ಮಾಹಿತಿ ದೊರೆಯಲಿದೆ. 40ಕ್ಕೂ ಅಧಿಕ ಕಂಪನಿಗಳು ಮೇಳದಲ್ಲಿ ಭಾಗವಹಿಸಲಿವೆ. ಅಡಕೆ ಒಣಗಿಸುವ ಯಂತ್ರ, ಡ್ರೋಣ್ ಮೂಲಕ ಔಷಧ ಸಿಂಪಡಿಸುವ, ಅಡಕೆ ಒಣಗಿಸುವ ಯಂತ್ರಗಳು ಪ್ರದರ್ಶನ ನಡೆಯಲಿದೆ.
ಪ್ರವೇಶ ಉಚಿತವಾಗಿದ್ದು ಹೆಚ್ಚು ರೈತರು ಈ ಮೇಳದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಸಂಘದ ನಿರ್ದೇಶಕ ಎಚ್.ಜಿ.ಮಲ್ಲಿಕಾರ್ಜುನ, ಕಾರ್ಯದರ್ಶಿ ಡಿ.ಎಚ್.ಶಿವಕುಮಾರ್, ಟೆಂಡರ್ ಟುಡೇ ಸಮೂಹದ ಶಿವಾನಂದ ಇದ್ದರು.



