ದಾವಣಗೆರೆ: ನಗರದ ಹೊರ ವಲಯದ ಎಚ್. ಕಲ್ಪನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸಾವನ್ನಪ್ಪಿದ್ದಾನೆ.
ಆಂಬುಲೆನ್ಸ್ ಗೆ ದಾರಿ ಮಾಡಿಕೊಡುವಾಗ ಟ್ರ್ಯಾಕ್ಟರ್ ಓವರ್ ಟೆಕ್ ಮಾಡುಲು ಹೋಗಿ ಟ್ರ್ಯಾಲಿ ಹಿಂಭಾಗಕ್ಕೆ ಬೈಕ್ ಸವಾರ ಗುದ್ದಿದ್ದಾನೆ. ಈ ಭೀಕರ ಅಪಘಾತದಲ್ಲಿ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಚಿತ್ರದುರ್ಗದ ಕಡೆಯಿಂದ ದಾವಣಗೆರೆಗೆ ಬರುವಾಗ ಈ ಘಟನೆ ನಡೆದಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



