ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ 7ನೇ ಘಟಿಕೋತ್ಸವ ಜನವರಿಯಲ್ಲಿ ನಡೆಯಲ್ಲಿದ್ದು, ವಿದ್ಯಾರ್ಥಿಗಳು 7ನೇ ಘಟಿಕೋತ್ಸವದ ಪ್ರಮಾಣ ಪತ್ರಕ್ಕಾಗಿ ಅರ್ಜಿಯನ್ನು ಸಲ್ಲಿಸಲಿಸಬಹುದು. 2018 ನವೆಂಬರ್-ಡಿಸೆಂಬರ್ ಹಾಗೂ ಮೇ-ಜೂನ್ ರಲ್ಲಿ ನಡೆದ ವಿವಿಧ ಸ್ನಾತಕೋತ್ತರ,ಪಿಹೆಚ್‍ಡಿ, ಎಂ.ಫಿಲ್, ಪದವಿಗಳ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹಿಂದಿನ ವರ್ಷಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಪದವಿ ಪ್ರಮಾಣ ಪತ್ರದ ಅರ್ಜಿಗಳನ್ನು ಆನ್‍ಲೈನ್ ತಂತ್ರಜಾಲ www.davangereuniversity.ac.in ನಲ್ಲಿ Examination ಮೆನುವಿಗೆ ಹೋಗಿ DU Portal ನಲ್ಲಿ Convocation ಮೂಲಕ ಅರ್ಜಿಯನ್ನು Upload ಮಾಡಬೇಕು. ಅರ್ಜಿ ಸಲ್ಲಿಸಲು ಡಿ.28 ಕಡೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ : 6363341215, 6363337901 ಹಾಗೂ 6363351762 ನ್ನು ಸಂಪರ್ಕಿಸಬಹುದು.
ಪಿ.ಹೆಚ್.ಡಿ,ಎಂ.ಫಿಲ್ ಪದವೀಧರರು ಅರ್ಜಿಯನ್ನು ನೇರವಾಗಿ ಆನ್‍ಲೈನ್‍ನಲ್ಲಿ ವಿಶ್ವವಿದ್ಯಾನಿಲಯದ ವೆಬ್‍ಸೈಟ್ www.davangereuniversity.ac.in ನಲ್ಲಿ ನೀಡಲಾಗಿರುವ ನೋಂದಣಿ ಸಂಖ್ಯೆಗಳನ್ನು ಬಳಸಿ ಅರ್ಜಿ ಸಲ್ಲಿಸಲ್ಲಿಸಿ.