ಡಿವಿಜಿ ಸುದ್ದಿ, ದಾವಣಗೆರೆ: ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ಮನೆ ಕಟ್ಟುವವರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 1.50 ಲಕ್ಷ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.ವಾರ್ಷಿಕ 3 ಲಕ್ಷ ಆದಾಯವಿರುವ ಹಾಗೂ ಸ್ವಂತ ಜಾಗ ಹೊಂದಿರುವ ಸಾರ್ವಜನಿಕರು ಅರ್ಜಿ ಸಲ್ಲಿಸಿ 1.5 ಲಕ್ಷ ಸಹಾಯಧನವನ್ನು ಪಡೆಯಬಹುದು.
ನಿಗದಿತ ಅರ್ಜಿ ನಮೂನೆಯನ್ನು ಕಚೇರಿಯಲ್ಲಿ ಪಡೆಯಬಹುದು.ಅರ್ಜಿದಾರರು ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು, ಫೊಟೋ, ಕುಟುಂಬ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಆಧಾರಕಾರ್ಡ್(ಅರ್ಜಿದಾರರ ಮತ್ತು ಅವರ ಅವಲಂಬಿತರ), ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪುಸ್ತಕ, ಇನ್ನಿತರೇ ಅಗತ್ಯ ದಾಖಲೆಗಳನ್ನು ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಶ್ರಯ ಶಾಖೆಯ ವಿಷಯ ನಿರ್ವಾಹಕರನ್ನು ಸಂಪರ್ಕಿಸಬಹುದು.



