ದಾವಣಗೆರೆ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿಸಿದೆ. ಈ ಚಿತ್ರದ ಪ್ರಮೋಷನ್ ಅನ್ನು ದರ್ಶನ್ ಅಭಿಮಾನಿಗಳು ಎಲ್ಲೆಡೆ ಮಾಡತೊಡಗಿದ್ದಾರೆ. ದಾವಣಗೆರೆಯಲ್ಲಿಯೂ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳ ಸಮ್ಮುಖದಲ್ಲಿ ಕ್ರಾಂತಿ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ನಗರದ ಎಂಸಿಸಿ ಬಿ ಬ್ಲಾಕ್ ನ ಪುನೀತ ಆನಂದವನದ ಗಣಪತಿ ಮೂರ್ತಿ ಎದುರು ದಾವಣಗೆರೆ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಗಡಿಗುಡಾಳ್ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ಅಭಿಮಾನಿಗಳ ಪಾಲಿಗೆ ದರ್ಶನ್ ಎಂದರೆ ಆರಾಧ್ಯ ದೈವ. ಕ್ರಾಂತಿ ಸಿನಿಮಾವಂತೂ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ದರ್ಶನ್ ಅಭಿನಯ ಅಂದರೆ ಸಾಕು
ಫ್ಯಾನ್ಸ್ ಪಾಲಿಗೆ ಎಲ್ಲಿಲ್ಲದ ಸಂಭ್ರಮ. ದರ್ಶನ್ ಸಿನಿಮಾ ಬಿಡುಗಡೆಯಾದರೆ ಹಬ್ಬದಂತೆ ಅಭಿಮಾನಿಗಳು ಆಚರಿಸುತ್ತಾರೆ ಎಂದು ಹೇಳಿದರು.
ಅಭಿಮಾನಿಗಳ ಪಾಲಿಗೆ ದಾಸ. ಅಭಿನಯಕ್ಕೆ ಬಂದರೆ ದರ್ಶನ್ ಗೆ ಅವರೇ ಸಾಟಿ. ದರ್ಶನ್ ತೂಗುದೀಪ ಅಭಿನಯದ ಯಾವ ಸಿನಿಮಾ ಬಿಡುಗಡೆಯಾದರೂ ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಳ್ಳುತ್ತಾರೆ. ಚಿತ್ರ ವೀಕ್ಷಿಸಲು ರಾತ್ರಿಯಿಂದಲೇ ಸಾಲು ಸಾಲಿನಲ್ಲಿ ನಿಂತು ಟಿಕೆಟ್ ಪಡೆಯುತ್ತಾರೆ. ಅಷ್ಟೊಂದು ಕ್ರೇಜ್ ದರ್ಶನ್ ಗೆ ಇದೆ ಎಂದು ತಿಳಿಸಿದರು.
ದರ್ಶನ್ ಅಭಿಮಾನಿಗಳು ಪೋಸ್ಟರ್ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿದ್ದು ನನಗೆ ತುಂಬಾನೇ ಖುಷಿ ಕೊಟ್ಟಿದೆ. ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಯಶಸ್ವಿಯಾಗಲಿ. ಈ ಚಿತ್ರದ ಮೂಲಕ ಅಭಿಮಾನಿಗಳನ್ನು ರಂಜಿಸಲಿ ಎಂದು ಶುಭಹಾರೈಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಮುದ್ದೇಗೌಡ್ರು ಗಿರೀಶ್, ಮಾಗನಹಳ್ಳಿ ಪರಶುರಾಮ್, ಜಿ. ಪಂ. ಮಾಜಿ ಸದಸ್ಯ ಕರಿಬಸಪ್ಪ, ಮಹಾಂತೇಶ್, ಅಶೋಕ್, ಮೋಹನ್, ನಿಖಿಲ್, ಪ್ರಮೋದ್, ಶಿವಣ್ಣ, ವಿನಾಯಕ ಗೆಳೆಯರ ಬಳಗದವರು ಹಾಗೂ ದರ್ಶನ್ ಅಭಿಮಾನಿಗಳು ಹಾಜರಿದ್ದರು.



