ದಾವಣಗೆರೆ: ನಗರದ ಎವಿಕೆ ಕಾಲೇಜು ರಸ್ತೆಯ ಮಹಾವೀರ ಜ್ಯೂಸ್ ಹಾಗೂ ಕಬ್ಬಿನ ಹಾಲಿನ ಅಂಗಡಿಯಲ್ಲಿ ಇಂದು ಬೆಳಗಿನಜಾವ ಕಳ್ಳತನವಾಗಿದೆ. ಕಳ್ಳರು ಅಂಗಡಿಗೆ ಮೇಲ್ಛಾವಣಿಗೆ ಹಾಕಲಾಗಿದ್ದ ಶೀಟ್ ಕೊರೆದು ಅಂಗಡಿ ಯಲ್ಲಿ ಇದ್ದ ಹಣ ದೋಚಿ ಪರಾರಿಯಾಗಿದ್ದಾರೆ. ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಂಗಡಿ ಮಾಲೀಕರ ಮಾಹಿತಿ ಪ್ರಕಾರ 5 ಸಾವಿರ ನಗದು ಕಳ್ಳತನವಾಗಿದೆ.



