ದಾವಣಗೆರೆ: ಜಿಲ್ಲೆಯ ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಮುಸ್ಟೂರು ಗ್ರಾಮದ ಪ್ರಾಥಮಿಕ ಶಾಲೆ ಹತ್ತಿರ ಮಟ್ಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಹಾಯಕ ಪೊಲೀಸ್ ಅಧೀಕ್ಷಕ ಕನ್ನಿಕಾ ಸಕ್ರಿವಾಲ್ ನೇತೃತ್ವದಲ್ಲಿ ದಾಳಿ ಮಾಡಿದ್ದು, ಒಟ್ಟು 30,210/- ರೂಗಳು, ಬೈಕ್, ಮೊಬೈಲ್ ಹಾಗೂ ಆರೋಪಿ ಬಂಧಿಸಿದ್ದಾರೆ.
ಸಿಬ್ಬಂದಿಗಳಾದ ಎ.ಎಸ್.ಐ. ಕರಿಬಸಪ್ಪ, ಯಾಸೀನ್ ವುಲ್ಲಾ, ಹಾಗೂ ಸೈಯದ್ ಗಫೂರ್, ತಿಮ್ಮೇಶಿ, ನೂರುಲ್ಲಾ ಇವರನ್ನು ಒಳಗೊಂಡ ತಂಡದೊಂದಿಗೆ ಮೇಲ್ಕಂಡ ಸ್ಥಳಕ್ಕೆ ದಾಳಿ ಮಾಡಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದ ಒಟ್ಟು 30,210/- ರೂಗಳು, ಒಂದು ಬೈಕ್, ಒಂದು ಮೊಬೈಲ್ ಹಾಗೂ ಓ.ಸಿ. ಮಟ್ಕಾ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಸಂಬಂಧ ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.