ದಾವಣಗೆರೆ: ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆಯ ವಾಹನ ಸವಾರರ ಮೇಲೆ ದಂಡ ವಿಧಿಸಿದ್ದು, ಕಳೆದ ಆರು ತಿಂಗಳಲ್ಲಿ ಒಟ್ಟು 25,088 ಕೇಸ್ ಗಳಲ್ಲಿ 1 ಕೋಟಿ 3 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ. ನಗರದಲ್ಲಿ ಕರ್ಕಶವಾಗಿ ಶಬ್ದ ಮಾಡುತ್ತಿದ್ದ 52 ಸೈಲೆನ್ಸರ್ ಪೈಪ್ಗಳನ್ನು ವಶಕ್ಕೆ ಪಡೆದು ಎಸ್ ಪಿ ಸಿ.ಬಿ ರಿಷ್ಯಂತ್ ಸಮ್ಮುಖದಲ್ಲಿ ರೋಲರ್ ಹತ್ತಿಸುವ ಮೂಲಕ ನಾಶ ಪಡಿಸಲಾಯಿತು.
83 ತ್ರಿಬಲ್ ರೈಡಿಂಗ್, 76 ರ್ಯಾಶ್ ಡ್ರೈವಿಂಗ್ ನಲ್ಲಿ ಲೈಸೆನ್ಸ್ ಕ್ಯಾನ್ಸಲ್, 52 ಡಿಫೆಕ್ಟಿವ್ ಸೈಲೆನ್ಸರ್ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ದಂಡ ವಸೂಲಿ ಮಾಡಿದ್ದಾರೆ. ದಾವಣಗೆರೆ ಸಂಚಾರಿ ಠಾಣೆ ಪೊಲೀಸರ ಈ ಸಾಧನೆಗೆ ಎಸ್ ಪಿ ಸಿ ಬಿ ರಿಷ್ಯಂತ್ ಅಭಿನಂಧನೆ ತಿಳಿಸಿದ್ದಾರೆ.



