ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾದಿಂದ SSLC, PUC ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಲ್ಲಿಸಬಹುದು.
ಪ್ರತಿಭಾವಂತರು ವಿದ್ಯಾರ್ಥಿಗಳು ಸ್ವ-ವಿವರಗಳೊಂದಿಗೆ ( ಒಂದು ಭಾವಚಿತ್ರ, ಧೃಡಿಕರಿಸಿದ ಅಂಕಪಟ್ಟಿ ಮತ್ತು ಜಾತಿ ಪ್ರಮಾಣಪತ್ರ) ಅರ್ಜಿ ಸಲ್ಲಿಸಬೇಕು. ಮಹಾ ಸಭಾದ ವೆಬ್ ಸೈಟ್ www.veerashaivamahasabha.in ಮೂಲಕ ಅರ್ಜಿ ಸಲ್ಲಿಸಬಹುದು. ಜು. 07 ರಿಂದ 20ರವರೆಗೆ ಅರ್ಜಿ ಸಲ್ಲಿಸಲು ಅವಕಾಶ. ಅಂಚೆ ಮತ್ತು ಕೂರಿಯರ್ ಮೂಲಕ ಬಂದ ಅರ್ಜಿಯನ್ನು ತಿರಸ್ಕರಿಸಲಾಗುವುದಿಲ್ಲ.