ಚಿಕ್ಕಮಗಳೂರು: ಕೆರೆಯಲ್ಲಿ ಈಜಲು ಹೋದ ಮೂವರು ಯುವಕರು ನೀರುಪಾಲಾದ ಘಟನೆ ಕಡೂರಲ್ಲಿ ನಡೆದಿದೆ.
ತಾಲೂಕಿನ ಅಣ್ಣೇಗೆರೆ ಗ್ರಾಮದ ಕೆರಯಲ್ಲಿ ರಾಕೇಶ್ (18), ಕಿರಣ್ (16), ದರ್ಶನ್ (20) ಎಂಬ ಯುವಕರು ಈಜಲು ಹೋಗಿದ್ದರು. ಈ ವೇಳೆ ಮೂವರು ಮೃತಪಟ್ಟಿದ್ದಾರೆ. ಪಂಚನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.



