ದಾವಣಗೆರೆ: ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ಹಿರೇಕೋಗಲೂರು ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ಸಂಯುಕ್ತಾಶ್ರಯದಲ್ಲಿ ಪ್ರಧಾನ ತರಬೇತಿ ಕಾರ್ಯಕ್ರಮ ಹಾಗೂ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ಕಚೇರಿಯ ಉದ್ಘಾಟನೆ ಮಾಡಲಾಯಿತು.
ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞ ಬಸವನಗೌಡ ಎಂ ಜಿ ಮಾತನಾಡಿ, ಅಡಿಕೆ ಬೆಲೆ ದಿನದಿಂದ ದಿನಕ್ಕೆ ವಿಸ್ತರಣೆ ಹೆಚ್ಚಾಗುತ್ತಿದ್ದು, ಅದೇ ರೀತಿ ಅಡಿಕೆಗೆ ಬರುವ ಕೀಟ ಮತ್ತು ರೋಗಗಳ ಬಾಧೆ ಸಹ ಹೆಚ್ಚಾಗುತ್ತಿದೆ. ಸಮರ್ಪಕವಾದ ನೀರು ನಿರ್ವಹಣೆ ಹಾಗೂ ಪೋಷಕಾಂಶಗಳ ನಿರ್ವಹಣೆ ಕೈಗೊಂಡರೆ ಅಡಿಕೆ ಇಳುವರಿಯನ್ನು ಹೆಚ್ಚಿಸಬಹುದು ಎಂದರು.
ಬೇಸಾಯ ತಜ್ಞ ಮಲ್ಲಿಕಾರ್ಜುನ ಬಿ. ಓ ಮಾತನಾಡಿ, ರೈತ ಉತ್ಪಾದಕ ಕಂಪನಿಗಳು ಲಾಭವನ್ನು ರೈತರು ಉಪಯೋಗಿಸಿಕೊಂಡು, ಮೌಲ್ಯವರ್ಧನೆ ಕಡೆ ಹೆಚ್ಚು ಗಮನ ಹರಿಸಿದರೆ ಆದಾಯವನ್ನು ದ್ವಿಗುಣ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಕಂಪನಿಯ ಅಧ್ಯಕ್ಷ ಶಿವಕುಮಾರ್ , ಮಾತನಾಡುತ್ತಾ ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ನಮ್ಮ ಕಂಪನಿಯ ಮುಖಾಂತರ ಷೇರುದಾರರಿಗೆ ಸಿಗುವಂತೆ ನಾವು ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರು , ಜಗದೀಶ್, ಉಪಾಧ್ಯಕ್ಷರು ಹಾಗೂ ಕಂಪನಿಯ ಎಲ್ಲಾ ನಿರ್ದೇಶಕರು, ಷೇರುದಾರರು ಭಾಗವಹಿಸಿದ್ದರು.



