ದಾವಣಗೆರೆ: ಇಂದು ಸಂಜೆ (ಜೂ.15) ದಾವಣಗೆರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾರೀ ಮಳೆಯಾಗಿದೆ. ಸತತ ಎರಡ್ಮೂರು ತಾಸು ಮಳೆ ಅಬ್ಬರಿಸಿದೆ.
ಭಾರೀ ಮಳೆಗೆ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದೆ. ಮಹಾ ಮಳೆಗೆ ದಾವಣಗೆರೆ ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಹೋಲಕ್ಕೆ ಹೋದ ಮಳೆಯರು ರಸ್ತೆಯಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಪರದಾಡಿದರು. ಹಗ್ಗದ ಸಹಾಯದಿಂದ ಗ್ರಾಮದ ಯುವಕರು ಮಹಿಳೆಯರು ಹಾಗೂ ಕುರಿ ಮರಿಗಳನ್ನು ರಕ್ಷಣೆ ಮಾಡಿದ್ದಾರೆ.
ಆಲೂರು ಮಾರ್ಗವಾಗಿ ಹೋಗುವ ವಿಜಯನಗರ ಜಿಲ್ಲೆಯ ಫಣಿಯಾಪುರ, ಕೆಂಚಪುರ, ಕುರೇಮಾಗನಹಳ್ಳಿ, ಉಚ್ಚಂಗಿದುರ್ಗದ ರಸ್ತೆ ಐದು ಗಂಟೆ ಬಂದ್ ಆಗಿತ್ತು. ತಾಲ್ಲೂಕಿನ ಅಣಜಿ, ಆಲೂರುಹಟ್ಟಿ ಆಲೂರು, ಕಾಡಜ್ಜಿ ಮಾರ್ಗವಾಗಿ ಹೋಗುವ ರಸ್ತೆಗಳು ಪೂರ್ತಿ ಜಲಾವೃತ್ತವಾಗಿತ್ತು.



