ದಾವಣಗೆರೆ: ನಗರದ ಶಾಂತಿನಗರ ರಿಂಗ್ ರಸ್ತೆಯ ವೆಸ್ಟ್ ಫೇಸ್ ಅಭಿನಯ ಭಾರತಿ ಶಾಲೆ ದಾವಣಗೆರೆ ಎದುರುಗಡೆ ಮನೆಯೊಂದರ ಕಾಂಪೌಂಡ್ ಗೇಟ್ ಒಳಭಾಗದಲ್ಲಿ ಹೆಣ್ಣು ಶಿಶು ಪತ್ತೆಯಾಗಿದೆ. ಜನಿಸಿದ ನವಜಾತ ಹೆಣ್ಣು ಶಿಶುವನ್ನು ಬಿಟ್ಟು ಹೋಗಿದ್ದರಿಂದ ಮಗುವನ್ನು ರಕ್ಷಿಸಲಾಗಿದ್ದು, ಶಿಶುವಿನ ಆರೋಗ್ಯ ಪ್ರಸ್ತುತ ಉತ್ತಮವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಶಿಶುವಿನ ಜೈವಿಕ ಪೋಷಕರು ಶಿಶುವನ್ನು ಪಡೆಯಲು ಶಿಶುವಿನ ಜನನಕ್ಕೆ ಸಂಬಂಧಿಸಿದ ಸೂಕ್ತವಾದ ದಾಖಲಾತಿಗಳೊಂದಿಗೆ ಪ್ರಕಟಣೆಗೊಂಡ 60 ದಿನಗಳ ಒಳಗಾಗಿ ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜೆ.ಹೆಚ್ ಪಟೇಲ್ ಬಡಾವಣೆ ಶಾಮನೂರು. ದೂ.ಸಂ-9591430013/8722358929 ಅಥವಾ ಸರ್ಕಾರಿ ವಿಶೇಷ ದತ್ತು ಸಂಸ್ಥೆ (ಅಮೂಲ್ಯ)(ಜಿ) ಲೋಕಿಕೆರೆ ರಸ್ತೆ, ಶ್ರೀರಾಮನಗರ, ದೂ.ಸಂ-7829215214 ದಾವಣಗೆರೆ ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



