ದಾವಣಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ ಆರ್ ಟಿಸಿ) ದಾವಣಗೆರೆ ವಿಭಾಗದಿಂದ ಪ್ರಸಕ್ತ ಸಾಲಿನ ವಿದ್ಯಾರ್ಥಿ ಉಚಿತ/ರಿಯಾಯಿತಿ ಬಸ್‍ಪಾಸ್‍ಗಳನ್ನು ಸೇವಾಸಿಂಧು ಯೋಜನೆಯಡಿ ಸೇವಾಸಿಂಧು ಪೋರ್ಟ್‍ಲ್ (ಆನ್‍ಲೈನ್)ನಲ್ಲಿ ಮೇ.23 ರಿಂದ ವಿತರಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮುಖಾಂತರ ಬಸ್‍ಪಾಸ್‍ಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವಾಗ ಸಂಬಂಧಪಟ್ಟ ದಾಖಲೆಗಳನ್ನು ಅಪ್‍ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ. ಫಲಾನುಭವಿಗಳು ಆನ್‍ಲೈನ್ ಮುಖಾಂತರ ದಾಖಲಾತಿಗಳನ್ನು ಅಪ್‍ಲೋಡ್ ಮಾಡಿದಾಗ್ಯೂ, ಭೌತಿಕವಾಗಿ ಬಸ್‍ಪಾಸ್‍ಗಳನ್ನು ಪಡೆಯಲು ಬಂದಾಗ ಮೂಲ ದಾಖಲೆಗಳು ಹಾಗೂ ಜೆರಾಕ್ಸ್ ಪ್ರತಿಯನ್ನು ಹಾಜರುಪಡಿಸಿ ಪಾಸ್‍ಗಳನ್ನು ಪಡೆಯುವುದು ಹಾಗೂ ಸೇವಾಸಿಂಧು ಅರ್ಜಿ, ಖಾಯಂ ವಿಳಾಸ ದಾಖಲಾತಿ (ಆಧಾರ್), ಪ್ರವೇಶ ರಸೀದಿ, Non SATS ವಿದ್ಯಾರ್ಥಿಗಳು ಕಡ್ಡಾಯವಾಗಿ ವಿದ್ಯಾಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಣ ಪತ್ರ ಅಪ್‍ಲೋಡ್ ಮಾಡುವುದು, ವಿಳಾಸ ಬದಲಾವಣೆ ಇದ್ದಲ್ಲಿ ವಿದ್ಯಾರ್ಥಿಗಳ ಸ್ವಯಂ ದೃಢೀಕರಣ ಪತ್ರ ಅಪ್‍ಲೋಡ್ ಮಾಡುವುದು, ಪ.ಜಾ/ಪ.ಪಂ ವಿದ್ಯಾರ್ಥಿಗಳು ಜಾತಿ ಪ್ರಮಾಣಪತ್ರ ಅಪ್‍ಲೋಡ್ ಮಾಡುವುದು ಕಡ್ಡಾಯವಾಗಿದೆ ಎಂದು ಕ.ರಾ.ರ.ಸಾ.ನಿಗಮ ದಾವಣಗೆರೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



