ದಾವಣಗೆರೆ: ನಿರಂತರ ಮಳೆಯಿಂದಾಗಿ ವಿದ್ಯುತ್ ಪಂಪ್ ಸೆಟ್ ತೆರವು ಗೊಳಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ನಡೆದಿದೆ.
ನಾಗರಾಜ್ (28) ಸಾವನ್ನಪ್ಪಿದ ಯುವಕನಾಗಿದ್ದು, ನಿರಂತರ ಮಳೆ ಹಿನ್ನೆಲೆ ವಿದ್ಯುತ್ ಪಂಪ್ ಸೆಟ್ ಹಾಳಾಗುವ ಭೀತಿ ಹಿನ್ನೆಲೆ ತೆರವಿಗೆ ಮುಂದಾಗಿದ್ದ. ಈ ವೇಳೆ ಪಂಪ್ಸೆಟ್ಗೆ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆ. ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.