ಬೆಂಗಳೂರು: ಜಿಜೆಪಿ ಪಕ್ಷ ಸಂಘಟನೆಗೆ ವಿವಿಧ ಜಿಲ್ಲೆಯ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಮಂಡ್ಯ ಜಿಲ್ಲಾಧ್ಯಕ್ಷರಾಗಿ ಸಿ.ಪಿ. ಉಮೇಶ್, ತುಮಕೂರು ಜಿಲ್ಲಾಧ್ಯಕ್ಷರಾಗಿ ಎಚ್.ಎಸ್. ರವಿಶಂಕರ್, ವಿಜಯ ನಗರ ಜಿಲ್ಲಾ ಪ್ರಭಾರಿ ಗಿರಿಗೌಡ, ಮಧುಗಿರಿ ಜಿಲ್ಲಾ ಪ್ರಭಾರಿಯಾಗಿ ವಿಕಾಸ್ ಪುತ್ತೂರು, ರಾಮನಗರ ಜಿಲ್ಲಾ ಸಹ ಪ್ರಭಾರಿಯಾಗಿ ಕೆ.ಜೆ ವಿಜಯ ಕುಮಾರ್, ಬೆಂಗಳೂರು ಉತ್ತರ ಜಿಲ್ಲಾ ಪ್ರಭಾರಿಯಾಗಿ ಪಿ.ಎನ್ . ಸದಾಶಿವ, ಜಿಲ್ಲಾ ಸಹ ಪ್ರಭಾರಿ ಕಿರಣ್ ಬಾಬು, ಬೆಂಗಳೂರು ಕೇಂದ್ರ ಜಿಲ್ಲಾ ಪ್ರಭಾರಿಯಾಗಿ ಅಶ್ವಥ್ ನಾರಾಯಣರಾವ್ ಅವರನ್ನು ಆಯ್ಕೆ ಮಾಡಲಾಗಿದೆ.



