ದಾವಣಗೆರೆ: ಎಲೆಕ್ಟ್ರಿಕ್ ಬೈಕ್ ಸಬ್ಸಿಡಿ ಕೊಡಿಸುವ ಸೋಗಿನಲ್ಲಿ ಓಲಾ ಎಲೆಕ್ಟ್ರಿಕ್ ಬೈಕ್ ಕಂಪನಿ ಮ್ಯಾನೇಜರ್ ಎಂದು ಹೇಳಿಕೊಂಡ ಅಪರಿಚಿತ ವ್ಯಕ್ತಿಯೊಬ್ಬ ನಗರದ ಯುವಕನಿಗೆ 1.33 ಲಕ್ಷ ವಂಚನೆ ಮಾಡಿದ ಘಟನೆ ನಡೆದಿದೆ.
ನಿಟುವಳ್ಳಿಯ ಸಾಫ್ಟ್ ನರ್ಸ್ ನವೀನ್ ಕುಮಾರ್ ವಂಚನೆಗೆ ಒಳಗಾದ ಯುವಕನಾಗಿದ್ದು, ಆನ್ ಲೈನ್ ಮೂಲಕ 1.33 ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾನೆ. ನವೀನ್ ಕುಮಾರ್ ಮೊವೈಲ್ ಗೆ ಓಲಾ ಎಲೆಕ್ಟ್ರಿಕ್ ಬೈಕ್ ಸಬ್ಸಿಡಿ ಕೊಡಿಸುವುದಾಗಿ ಸಂದೇಶ ಬಂದಿದೆ. ನಂತರ ಫೋನ್ ಮೂಲಕ ತಾನು ಓಲಾ ಕಂಪನಿ ಮ್ಯಾನೇಜರ್ ಎಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿ, ಎಲೆಕ್ಟ್ರಿಕ್ ಬೈಕ್ ಸಬ್ಸಿಡಿ ಕೊಡಿಸುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ನವೀನ್ ಡಿಲವರಿ ಚಾರ್ಜ್, ಶುಲ್ಕ,ವಿಮಾ ಹೆಸರಲ್ಲಿ 1.33 ಲಕ್ಷ ಹಾಕಿಸಿಕೊಂಡು ವಂಚನೆ ಮಾಡಿದ್ದಾನೆ. ಈ ಬಗ್ಗೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.