ಮಕ್ಕಳಿಗೆ ಪಾಠ ಹೇಳೋದು ಬಿಟ್ಟು ಬಡ್ಡಿ ವ್ಯವಹಾರಕ್ಕೆ ನಿಂತಿದ್ದ ಮೇಸ್ಟ್ರಿಗೆ ಗ್ರಾಮಸ್ಥರ ಫುಲ್ ಕ್ಲಾಸ್

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ಡಿವಿಜಿ ಸುದ್ದಿ, ಕೂಡ್ಲಿಗಿ: ಸಾಮಾನ್ಯವಾಗಿ ಶಿಕ್ಷಕರೆಂದ್ರೆ  ಮಕ್ಕಳಿಗೆ ಪಾಠ ಹೇಳೋದು, ಮಕ್ಕಳು ವಿದ್ಯಾಭ್ಯಾಸದ ಕಡೆ ಒಲವು ಬರುವಂತೆ ಪ್ರೋತ್ಸಾಹಿಸುವುದನ್ನು ನೋಡಿದ್ದೇವೆ. ಇಂತಹ ಅತ್ಯಮೂಲ್ಯವಾದ ವೃತ್ತಿ ಬಿಟ್ಟಿ ಇಲ್ಲೊಬ್ಬ ಶಿಕ್ಷಕ ಸಂಬಳಕ್ಕೆ ಮಾತ್ರ ಹಾಜರಾಗಿ ಪಾಠ ಹೇಳೋದಕ್ಕೆ  ಚಕರ್ ಹಾಕಿ,  ಊರಲ್ಲಿ ಬಡ್ಡಿ ವ್ಯವಹಾರ, ಒಣ ರಾಜಕಾರಣ ಮಾಡೋಕೆ ನಿಂತಿದ್ದಾನೆ.

kudali dvgsuddi

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ತಾಲೂಕಿನ ತುಪ್ಪಕನಹಳ್ಳಿ ಗ್ರಾಮದ ಸಕಾ೯ರಿ ಶಾಲೆಯ ಬಸಪ್ಪ  ಎನ್ನುವ ಶಿಕ್ಷಕ  ಇಂತಹ ವ್ಯವಹಾರಕ್ಕೆ ಕೈ ಹಾಕಿರೋ ಶಿಕ್ಷಕ.  ಕಳೆದ 20 ವಷ೯ಗಳಿಂದ ತುಪ್ಪಕನಹಳ್ಳಿಯಲ್ಲಿಯೇ ಕೆಲಸ ನಿರ್ವಹಿಸುವ ಈತ ಶಾಲೆ ಹಾಜರಾತಿ ಬುಕ್ ನಲ್ಲಿ ಸಹಿ ಹಾಕಿ ಊರಿನಲ್ಲಿ  ರಾಜಕೀಯ ಮಾಡುವ ಹಾಗೂ ಬಡ್ಡಿ ವ್ಯಾವಹಾರದಲ್ಲಿ ತೊಡಗಿರುತ್ತಾನೆ. ಶಿಕ್ಷಕ ಬಸಪ್ಪ ಅವರ ಈ ಕಾರ್ಯಕ್ಕೆ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಶಾಲಾ ವಾತಾವರಣ ತೀರಾ ಅದೋಗತಿಗೆ ಬಂದಿದ್ದು, ಇಂತಹ ಶಿಕ್ಷಕರನ್ನು  ಕೂಡಲೇ ವಗಾ೯ಯಿಸಬೇಕೆಂದು ಗ್ರಾಮಸ್ಥರು ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

kudali dvgsuddi 2

ಶಾಲೆಯ ಎಸ್ ಡಿಎಂಸಿ ಸದಸ್ಯರು ಹಾಗು ಗ್ರಾಮದ ಯುವಕರು ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದು, ಬಸಪ್ಪ ಕಳೆದ 20 ವಷ೯ಗಳಿಂದ ನಮ್ಮ ೂರಿನಲ್ಲಿಯೇ ಶಿಕ್ಷಕರಾಗಿದ್ಧಾರೆ.  ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿ ತರಗತಿಗೆ ಪಾಠ ಮಾಡಲು ಹಾಜರಾಗದೇ ಗ್ರಾಮದಲ್ಲಿ ಗುಂಪುಗಾರಿಕೆ, ಒಣ ರಾಜಕೀಯ ಮಾಡುತ್ತಾ  ತನ್ನ ಬಡ್ಡಿ ವ್ಯವಹಾರದಿಂದ ಕುಖ್ಯಾತಿ ಹೊಂದಿದ್ದಾರೆ. ತನಗೆ ರಾಜಕಾರಣಿಗಳ ಕೃಪೆಯಿದ್ದು.ಜಿಲ್ಲಾ ಮಟ್ಟದ ಶಿಕ್ಷಣಾಧಿಕಾರಿಗಳೇ ಏನು ಮಾಡವುದಕ್ಕೆ ಆಗಲ್ಲ.  ಇನ್ನು ಕೇತ್ರ  ಶಿಕ್ಷಣಾಧಿಕಾರಿಗಳಿಗೆ ಏನೂ ಕ್ರಮಕೈಗೊಳ್ಳತ್ತಾರೆ ಅಂತಾ ಉದ್ಧಟನದ ಹೇಳಿಕೆ ನೀಡುತ್ತಿದ್ದಾರೆ. ಇಂತಹ ಶಿಕ್ಷಕರಿಂದ  ಮಕ್ಕಳ ಭವಿಷ್ಯಕ್ಕೆ ಧಕ್ಕೆಯಾಗಿದ್ದು, ಕೂಡಲೇ ವಗಾ೯ಯಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

kudali dvgsuddi 4

kudali dvgsuddi 1

ಒಂದು ವಾರದೊಳಗೆ ಶಿಕ್ಷಕರನ್ನು ವಗಾ೯ಯಿಸದಿದ್ದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಹಾಗೂ ಶಿಕ್ಷಕ  ಬಸಪ್ಪನ ವಿರುದ್ಧ ಜಿಲ್ಲಾಧಿಕಾರಿಗಳಲ್ಲಿ ದೂರು ನೀಡಲಾಗುವುದೆಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ. ಈ ಸಂದಭ೯ದಲ್ಲಿ ಎಸ್ ಡಿಎಂಸಿ ಪದಾಧಿಕಾರಿಗಳು. ಸದಸ್ಯರು,ಗ್ರಾಮಸ್ಥರು ಉಪಸ್ಥಿತರಿದ್ದರು.

-ವರದಿ: ವಂದೇ ಮಾತರಂ ವಿ.ಜಿ.ವೃಷಭೇಂದ್ರ

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *