ಡಿವಿಜಿ ಸುದ್ದಿ, ಚನ್ನಗಿರಿ: ನಮ್ಮ ಶಾಲೆಗೆ ಸೂಕ್ತ ಶೌಚಾಲಯವಿಲ್ಲ, ಸರಿಯಾದ ಆಟದ ಮೈದಾನವಿಲ್ಲ, ಇನ್ನು ಕುಳಿತು ಪಾಠ ಕೇಳೋಣವೆಂದ್ರೆ ಡೆಸ್ಕ್ ವ್ಯವಸ್ಥೆ ಇಲ್ಲ.. ಹೀಗೆ ಇಲ್ಲಗಳ ಮಧ್ಯೆ ಪಾಠ ಕೇಳೋದಾದ್ರೂ ಹೇಗೆ ಅಂತಾ ಶಾಲಾ ಮಕ್ಕಳ ಪ್ರಶ್ನೆಗೆ ಗ್ರಾಮ ಪಂಚಾಯತಿ ಸದಸ್ಯರು, ಅಧಿಕಾರಿಗಳು ಉತ್ತರಿಸಲು ತಡವರಿಸಿದರು.

ತಾಲೂಕಿನ ಕೋಗಲೂರು ಗ್ರಾಪಂ ಕಾರ್ಯಲಯದಲ್ಲಿ ಮಕ್ಕಳಗೆ ವಿಶೇಷವಾಗಿ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಶಾಲಾ ಮಕ್ಕಳು ತಮ್ಮ ಶಾಲೆಯ ಕುಂದುಕೊರತೆಗಳನ್ನು ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಸದಸ್ಯರ ಮುಂದೆ ಮಂಡಿಸಿದ ಪರಿ.

ನಮ್ಮೂರಿನ ಶಾಲೆಗೆ ಸುತ್ತಮುತ್ತಲಿನ ಊರುಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ಬರುತ್ತಾರೆ. ಆದರೆ, ಅವರಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಬಸ್ ವ್ಯವಸ್ಥೆ ಇಲ್ಲ. ಕೂಡಲೇ ಊರಿನ ಮುಖಂಡರು, ಗ್ರಾಮ ಪಂಚಾಯತಿ ಅಧಿಕಾರಿಗಳು ಬಸ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಇನ್ನು ಶಾಲೆಯಲ್ಲಿ ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲ. ಕುಳಿತುಕೊಳ್ಳಲು ಡೆಸ್ಕ್ ಸಹ ಇಲ್ಲ. ಆಟದ ಮೈದಾನದ್ದು ಇದೇ ಸ್ಥಿತಿ ಎಂದು ಗ್ರಾಮ ಪಂಚಾಯತಿ ಸದಸ್ಯರು ಮತ್ತು ಅಧಿಕಾರಿಗಳ ಗಮನ ಸೆಳೆದರು.
ಈ ಸಭೆಯಲ್ಲಿ ಸಿ ಆರ್ ಪಿ ತಿಮ್ಮೆಶ್, ಪ್ರಾಂಶುಪಾಲ ಬಸವರಾಜಪ್ಪ ,ಪ್ರಭಾಕರ ಎಂ ಬಿ , ಗ್ರಾಪಂ ಅಧ್ಯಕ್ಷೆ ಅನುಭಾಗ್ಯಮ್ಮ ಜಗದೀಶ್ , ಪಿ ಡಿಒ ಬಿ. ಶೇರ್ ಆಲಿ, ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಸಿರಿನ್ ತಾಜ್ , ಗ್ರಾಪಂ ಉಪಾಧ್ಯಕ್ಷ ಶಂಕರಮ್ಮ, ಸದಸ್ಯರಾದ ಶಂಕ್ರಪ್ಪ , ಗೀತಮ್ಮ , ಸುಮಾ , ಕುಮಾರ್ , ಗ್ರಾಮದ ಮುಖಂಡರುಗಳಾದ ಜಗದೀಶ್ ಕೆಜಿ , ಬಿಜಿ ಸ್ವಾಮಿ , ವೀರಭದ್ರಪ್ಪ ಅಂಗನವಾಡಿ ಕಾರ್ಯಕರ್ತೆಯರು , ಆಶಾ ಕಾರ್ಯಕರ್ತೆಯರುಗಳು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.



