ದಾವಣಗೆರೆ: ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಸಾರ್ವಜನಿಕರ ಉಪಯೋಗಕ್ಕಾಗಿ ಪ್ಯಾನ್ ಸಿಟಿ ಐ.ಸಿ.ಟಿ ಕಾಮಗಾರಿಯಡಿಯಲ್ಲಿ ಒಂದು ನಗರ, ಒಂದು ವೆಬ್‍ಸೈಟ್ ಹಾಗೂ ಮೊಬೈಲ್ ಅಪ್ಲಿಕೇಷನ್ ಅನ್ನು ಅನುಷ್ಠಾನ ಗೊಳಿಸಲಾಗುತ್ತಿದೆ.
ಆಧುನಿಕ ತಂತ್ರಜ್ಞಾನದಲ್ಲಿ ದಿನ ನಿತ್ಯಜೀವನಕ್ಕೆ ಅನುಕೂಲವಾಗುವ ಎಲ್ಲಾ ಅಗತ್ಯ ಸೌಲಭ್ಯಗಳು ಒಂದೇ ತಂತ್ರಾಂಶದಲ್ಲಿ ಪಡೆಬಹುದಾಗಿರುತ್ತದೆ. ಕನ್ನಡ ಮತ್ತು ಆಂಗ್ಲ ಎರಡು ಭಾಗಗಳಲ್ಲಿ ಲಭ್ಯ, ಈ ವೆಬ್ ಪೋರ್ಟಲ್‍ನಲ್ಲಿ ಆನ್‍ಲೈನ್‍ನಲ್ಲಿ ಬಿಲ್ ಪಾವತಿಸುವುದು, ಪ್ರವಾಸಿ ತಾಣಗಳು, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾಹಿತಿ, ಆಸ್ಪತ್ರೆಗಳ ವಿವರ ಹಾಗೂ ದಾವಣಗೆರೆ ನಗರಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಪಡೆಯ ಬಹುದಾಗಿರುತ್ತದೆ. ಸಾರ್ವಜನಿಕರ ಕುಂದು ಕೊರತೆಗಳನ್ನು ನೇರವಾಗಿ ರವಾನಿಸಿ ಮತ್ತು ಸಂಬಂಧಪಟ್ಟ ಇಲಾಖೆಗಳನ್ನು ಸಂಪರ್ಕಿಸಬಹುದಾದ ಹಾಗೂ ಸಾರ್ವಜನಿಕರ ದೂರುಗಳನ್ನು ಜೋಡಣೆ ಮಾಡಬಹುದಾದ ಸೌಲಭ್ಯವನ್ನು ಅಳವಡಿಸಲಾಗಿರುತ್ತದೆ.
ತಂತ್ರಜ್ಞಾನ ಆಧಾರಿತ ಸೇವೆಗಳನ್ನು ನಾಗರೀಕರಿಗೆ ಒದಗಿಸುವ ಉದ್ದೇಶದಿಂದ ಮೊದಲ ಬಾರಿಗೆ ಪ್ರಾಯೋಗಿಕ ಹಂತದ ಮುಖಾಂತರ ಪರಿಶೀಲಿಸಲಾಗುವುದು. ದಾವಣಗೆರೆ ನಗರದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಸಹಕರಿಸುವಂತೆ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೆಬ್ ಸೈಟ್ ಲಿಂಕ್ https:/dvg.karnatakasmartcity.in ಮತ್ತು ಗೂಗಲ್ ಪ್ಲೇ ಸ್ಟೋರ್‍ನಲ್ಲಿ “Dvg Smartcity One App” ಮುಖಾಂತರ ಮೊಬೈಲ್ ಅಪ್ಲಿಕೇಶನ್ ಡೌನ್‍ಲೋಡ್ ಮಾಡಕೊಳ್ಳಬಹುದು.



