ದಾವಣಗೆರೆ: ಆಜಾದ್ ನಗರದ ಟಿಪ್ಪು ಸರ್ಕಲ್ ಬಳಿಯ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ10 ಸಾವಿರ ಮೌಲ್ಯದ 500 ಗ್ರಾಂ. ಗಾಂಜಾ ಹಾಗೂ 300 ರೂಪಾಯಿ ನಗರದು ವಶಕ್ಕೆ ಪಡೆದಿದ್ದಾರೆ.ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಜಾದ್ ನಗರ ಪೊಲೀಸ್ ಠಾಣೆಯ ವೃತ್ತನಿರೀಕ್ಷಕ ಗಜೇಂದ್ರಪ್ಪ ನೇತೃತ್ವದಲ್ಲಿ ಪಿಎಸ್ ಐ ಗಳಾದ ಶಮೀಮ್ ಉನ್ನಿಸಾ, ಪ್ರವೀಣ್ ವಾಲೀಕರ್ ಹಾಗೂ ಸಿಬ್ಬಂದಿ ಒಳಗೊಂಡ ತಂಡ ಈ ದಾಳಿ ಮಾಡಿದೆ.