Connect with us

Dvgsuddi Kannada | online news portal | Kannada news online

ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರ ಆಯ-ವ್ಯಯ;1.22 ಕೋಟಿ ಉಳಿತಾಯ ಬಜೆಟ್ ಮಂಡನೆ

ದಾವಣಗೆರೆ

ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರ ಆಯ-ವ್ಯಯ;1.22 ಕೋಟಿ ಉಳಿತಾಯ ಬಜೆಟ್ ಮಂಡನೆ

ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರದ (ಧೂಡಾ) 2022-23ನೇ ಸಾಲಿನ ಆಯ-ವ್ಯಯವನ್ನು ಅಧಯಕ್ಷ ಕೆ.ಎಂ.ಸುರೇಶ್ ಅಧ್ಯಕ್ಷತೆಯಲ್ಲಿ ಮಂಡಿಸಲಾಯಿತು. ಧೂಡಾ ಆಯುಕ್ತ ಕುಮಾರಸ್ವಾಮಿ ರೂ.18258.76 ಲಕ್ಷಗಳ ಆದಾಯದ ಹಾಗೂ 18136.03 ಲಕ್ಷಗಳ ನಿರೀಕ್ಷಿತ ವೆಚ್ಚದ ಮತ್ತು ರೂ.122.73 ಲಕ್ಷಗಳ ಉಳಿತಾಯದ ಆಯಾವ್ಯಯವನ್ನು ಮಂಡಿಸಿದರು.

  • ಈ ಕೆಳಕಂಡಂತೆ 2022-23ರ ಆಯ-ವ್ಯಯದ ಪ್ರಮುಖ ಅಂಶಗಳು
  • 2022-23ನೇ ಸಾಲಿನಲ್ಲಿ ಪ್ರಾಧಿಕಾರವು ತನ್ನ ವಿವಿಧ ಬ್ಯಾಂಕ್‍ಗಳಲ್ಲಿ ನಿಶ್ಚಿತ ಠೇವಣಿ ಒಳಗೊಂಡಂತೆ ಪ್ರಸಕ್ತ ಸಾಲಿನಲ್ಲಿನ ಆದಾಯವು ರೂ.18258.76 ಲಕ್ಷಗಳು ಬರುವುದಾಗಿ ನಿರೀಕ್ಷಿಸಿರುತ್ತದೆ
  • 2022-23ನೇ ಸಾಲಿನಲ್ಲಿ ಪ್ರಾಧಿಕಾರವು ತನ್ನ ಸಾಮಾನ್ಯ ಆಡಳಿತದ ನಿಶ್ಚಿತ ವೆಚ್ಚಗಳನ್ನು ಒಳಗೊಂಡಂತೆ ಪ್ರಾಧಿಕಾರದ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ.18136.03 ಲಕ್ಷಗಳ ವೆಚ್ಚವನ್ನು ವಹಿಸಲು ಉದ್ದೇಶಿಸಲಾಗಿದೆ
  • 2022-23ನೇ ಸಾಲಿನಲ್ಲಿ ಪ್ರಾಧಿಕಾರವು ರೂ.122.73 ಲಕ್ಷಗಳ ಉಳಿತಾಯದ ಆಯಾವ್ಯಯವನ್ನು ಮಂಡಿಸಲಾಗಿರುತ್ತದೆ
  • 2022-23ನೇ ಸಾಲಿನಲ್ಲಿ ಉದ್ದೇಶಿಸಲಾಗಿರುವ ಅಭಿವೃದ್ಧಿ ಕಾಮಗಾರಿಗಳ ವಿವರ
  • 2021-22ನೇ ಸಾಲಿನಲ್ಲಿ ಕೈಗೊಂಡ ಕಾಮಗಾರಿಗಳು, ಕಾಮಗಾರಿಗಳು ಚಾಲ್ತಿಯಲ್ಲಿದ್ದು ಮುಂದುವರೆದ ಕಾಮಗಾರಿಗಳಾಗಿರುವುದರಿಂದ ದಾವಣಗೆರೆ ಹಾಗೂ ಹರಿಹರ ವ್ಯಾಪ್ತಿಯಲ್ಲಿನ ವಿವಿಧ ಕಾಮಗಾರಿಗಳಿಗೆ ಒಟ್ಟು ರೂ.10543.37 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ.
  • ಪ್ರಾಧಿಕಾರವು ಪ್ರಸಕ್ತ ಸಾಲಿನಲ್ಲಿ ಕುಂದುವಾಡ ಗ್ರಾಮದಲ್ಲಿ ಅಂದಾಜು 53.00 ಎಕರೆಯಲ್ಲಿ ನೂತನ ವಸತಿ ಬಡಾವಣೆ ನಿರ್ಮಾಣಕ್ಕಾಗಿ 2021-22ನೇ ಸಾಲಿನಲ್ಲಿ ರೂ.6000.00ಲಕ್ಷಗಳನ್ನು ಕಾಯ್ದಿರಿಸಿದ್ದು, ಇದರೊಂದಿಗೆ ಪ್ರಸಕ್ತ ಅವಧಿಯಲ್ಲಿ ರೂ.4000.00 ಲಕ್ಷಗಳನ್ನು ಕಾಯ್ದಿರಿಸಿದ್ದು, ಒಟ್ಟು ರೂ.10,000-00 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿರುತ್ತದೆ.
  • ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಬಾತಿ ಕೆರೆಯನ್ನು ಕೆರೆ ಸಂರಕ್ಷಣಾ ಪ್ರಾಧಿಕಾರದ ಅನುಮೋದನೆಯಂತೆ ಅಭಿವೃದ್ಧಿ ಪಡಿಸಿ ಸೌಂದರ್ಯಕರಣಗೊಳಿಸಿ ಹಾಗೂ ಆಕರ್ಷಕ ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ದಿ ಪಡಿಸುವ ಸಲುವಾಗಿ ರೂ.846.00 ಲಕ್ಷಗಳ ಮೊತ್ತವನ್ನು ಮುಂದುವರೆದ ಕಾಮಗಾರಿಯಲ್ಲಿ ಕಾಯ್ದಿರಿಸಿದ್ದು, ಈಗ ದರಗಳ ಏರಿಳಿತದಿಂದ 2022-23ನೇ ಸಾಲಿನ ಆಯಾವ್ಯಯದಲ್ಲಿ ರೂ.44.00 ಲಕ್ಷಗಳನ್ನು ಸೇರಿಸಿಕೊಂಡು ಒಟ್ಟು ರೂ.890.00 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿರುತ್ತದೆ.
  • ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಹಾಗೂ ದಾವಣಗೆರೆ ಮಹಾನಗರಕ್ಕೆ ಕುಡಿಯುವ ನೀರಿನ ಜಲ ಮೂಲವಾದ ಟಿ.ವಿ.ಸ್ಟೇಷನ್ ಕೆರೆಯನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ರೂ.275.00 ಲಕ್ಷಗಳನ್ನು ಮುಂದುವರೆದ ಕಾಮಗಾರಿಯಲ್ಲಿ ಕಾಯ್ದಿರಿಸಲಾಗಿದೆ.
  • ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಹೊನ್ನೂರು ಕೆರೆಯನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ರೂ.35.00 ಲಕ್ಷಗಳ ಮೊತ್ತವನ್ನು ಮುಂದುವರೆದ ಕಾಮಗಾರಿಯಲ್ಲಿ ಕಾಯ್ದಿರಿಸಲಾಗಿದೆ.
  • ದಾ-ಹ ನಗರಾಭಿವೃದ್ಧಿ ಪ್ರಾಧಿಕಾರವು ಮಹಾಯೋಜನೆ ವ್ಯಾಪ್ತಿಯಲ್ಲಿರುವ ಅಂದಾಜು 25.00 ಎಕರೆ ಭೂಮಿಯನ್ನು ಪ್ರಾಧಿಕಾರ ಮಹಾಯೋಜನೆಯಲ್ಲಿ ಉದ್ಯಾನವನಕ್ಕೆ ಕಾಯ್ದಿರಿಸಿರುವ ಜಮೀನುಗಳಲ್ಲಿ ಅಂದಾಜು 25.00 ಎಕರೆ ಜಮೀನನ್ನು ಭೂ ಸ್ವಾಧೀನ/ನೇರ ಖರೀದಿ ಮಾಡಿಕೊಂಡು ದಾವಣಗೆರೆ ನಾಗರೀಕರಿಗೆ ಒಂದು ಬೃಹತ್ ಅತ್ಯುತ್ತಮ ಉದ್ಯಾನವನ್ನು ನಿರ್ಮಿಸುವ ಸಲುವಾಗಿ ರೂ.1050.00 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ.
  • ಶ್ರೀ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ಪ್ರಾಧಿಕಾರದ ವಶದಲ್ಲಿರುವ ನಿವೇಶನದಲ್ಲಿ ಅಧಿಕಾರಿ/ನೌಕರರಿಗಾಗಿ ವಸತಿ ಸಮುಚ್ಛಯ ಹಾಗೂ ಅತಿಥಿ ಗೃಹ ನಿರ್ಮಾಣಕ್ಕಾಗಿ ರೂ.500.00 ಲಕ್ಷಗಳ ಮೊತ್ತವನ್ನು ಮುಂದುವರೆದ ಕಾಮಗಾರಿಯಲ್ಲಿ ಕಾಯ್ದಿರಿಸಲಾಗಿದೆ.
  • ಆರ್.ಟಿ.ಓ. ಕಛೇರಿ ಎದುರುಗಡೆಯಲ್ಲಿರುವ ಪ್ರಾಧಿಕಾರದ ಜಾಗದಲ್ಲಿ ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕಾಗಿ ರೂ.500.00 ಲಕ್ಷಗಳ ಮೊತ್ತವನ್ನು ಮುಂದುವರೆದ ಕಾಮಗಾರಿಯಲ್ಲಿ ಕಾಯ್ದಿರಿಸಲಾಗಿದೆ.
  • ಪ್ರಾಧಿಕಾರದ ವ್ಯಾಪ್ತಿಯ ಪಿ.ಬಿ. ರಸ್ತೆಯ ಡಿ.ಸಿ.ಎಂ. ಟೌನ್‍ಶಿಫ್‍ನ ರೈಲ್ವೆ ಅಂಡರ್ ಪಾಸ್ ನಿಂದ ಚಿಂದೋಡಿಲೀಲಾ ರಂಗ ಮಂದಿರದವರೆಗೆ ದ್ವಿಪಥ ರಸ್ತೆಯ ರಸ್ತೆ ವಿಭಜಕದಲ್ಲಿ ಅಲಂಕಾರಿಕ ಕೋನಿಕಲ್ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾಮಗಾರಿಗೆ ರೂ.179.00 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ.
  • ಪ್ರಾಧಿಕಾರ ವ್ಯಾಪ್ತಿಯಲ್ಲಿ ಪ್ರಾಧಿಕಾರದ ಮಹಾಯೋಜನೆಯಲ್ಲಿರುವ ಶ್ರೀ ಜಿ. ಮಲ್ಲಿಕಾರ್ಜುನಪ್ಪ ದ್ವಿಪಥ ರಸ್ತೆಯು ಪಿ.ಬಿ. ರಸ್ತೆಗೆ ಕೂಡುವ ಶ್ರೀ ಜಿ.ಮಲ್ಲಿಕಾರ್ಜುನ ವೃತ್ತದ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ರೂ.50.00 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ.
  • ಪ್ರಾಧಿಕಾgದಿಂದ ನಿರ್ಮಾಣ ಮಾಡಲಾದ ಶ್ರೀ ಜೆ.ಹೆಚ್.ಪಟೇಲ್ ಬಡಾವಣೆಯ ಸಂಪೂರ್ಣ ಅಭಿವೃದ್ಧಿ ರಸ್ತೆಗಳ ಡಾಂಬರೀಕರಣ, ವೃತ್ತಗಳ ಅಭಿವೃದ್ಧಿ, ಉದ್ಯಾನವನಗಳ ಅಭಿವೃದ್ಧಿ ಮತ್ತು ಸೋಲಾರ್ ದೀಪ ಅಳವಡಿಸಲು, ವಿದ್ಯುತ್ ದೀಪಗಳ ಅಳವಡಿಕೆ, ಕುಡಿಯುವ ನೀರು ಒಳಚರಂಡಿ ಹಾಗೂ ಸ್ವಚ್ಛತೆ ಸಂಬಂಧಿಸಿದ ಕಾಮಗಾರಿಗಳಿಗಾಗಿ ರೂ.975.00 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ.
  • ದಾವಣಗೆರೆ-ಹರಿಹರ ಮಹಾಯೋಜನೆ ಪರಿಷ್ಕೃತ ತಯಾರಿಕೆಗೆ ರೂ.50.00 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ.
  • ಪ್ರಾಧಿಕಾರದ ವ್ಯಾಪ್ತಿಯ ಹರಿಹರ ನಗರಕ್ಕೆ ಸಂಬಂಧಿಸಿದಂತೆ ವಿವಿಧ ರಸ್ತೆ ನಿರ್ಮಾಣ ಕಾಮಗಾರಿಗಳಿಗಾಗಿ ರೂ.100.00 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ.
  • ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ನಾಗನೂರು, ಶಿರಮಗೊಂಡನಹಳ್ಳಿ ಕೆರೆ ಅಭಿವೃದ್ಧಿ ಪಡಿಸುವ ಸಲುವಾಗಿ ರೂ.200.00 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ.
  • ಪ್ರಾಧಿಕಾರದ ವ್ಯಾಪ್ತಿಯ ತರಳಬಾಳು ಬಡಾವಣೆಯಲ್ಲಿ 10ನೇ ಕ್ರಾಸ್‍ನಲ್ಲಿ ಸಿ.ಸಿ. ರಸ್ತೆ ನಿರ್ಮಾಣಕ್ಕಾಗಿ ರೂ.75.00 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ.
  • ಪ್ರಾಧಿಕಾರದ ವ್ಯಾಪ್ತಿಯ ತರಳಬಾಳು ಬಡಾವಣೆಯಲ್ಲಿ 11ನೇ ಕ್ರಾಸ್‍ನಲ್ಲಿ ಸಿ.ಸಿ. ರಸ್ತೆ ನಿರ್ಮಾಣಕ್ಕಾಗಿ ರೂ.75.00 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ.
  • ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.33 ರಲ್ಲಿ ಬರುವ ದುರ್ಗಾಂಭಿಕಾ ಬಡಾವಣೆಯ ಮುಖ್ಯ ಮತ್ತು ಅಡ್ಡ ರಸ್ತೆ ಹಾಗೂ ಡಾಬಾ ಸ್ಟಾಪ್ ಎದುರಿನ ಮುಖ್ಯ ರಸ್ತೆಗಳಲ್ಲಿ ಸಿ.ಸಿ ರಸ್ತೆ ಅಭಿವೃದ್ದಿ ಕಾಮಗಾರಿ ಮತ್ತು ನಿಟುವಳ್ಳಿ ಮುಖ್ಯ ರಸ್ತೆಯಲ್ಲಿ ಹದಡಿ ರಸ್ತೆಯಿಂದ ಎಸ್.ಬಿ.ಐ. ಬ್ಯಾಂಕ್ ವರೆಗೂ ಮಳೆ ನೀರು ಚರಂಡಿ ನಿರ್ಮಾಣ ಕಾಮಗಾರಿಗೆ ರೂ.140.00 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ.
  • ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯ ವಿಜಯನಗರ ಬಡಾವಣೆಯ 1ನೇ ಮೇನ್, 2ನೇ ಕ್ರಾಸ್ ರಸ್ತೆಯಲ್ಲಿ ಸಿ.ಸಿ. ಚರಂಡಿ ಮತ್ತು ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ ರೂ.50.00 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ.
  • ದಾವಣಗೆರೆ ನಗರದ ಶ್ರೀ ಎಸ್.ನಿಜಲಿಂಗಪ್ಪ ಬಡಾವಣೆಯ ಅಮೃತಮಯಿ ಶಾಲೆಯ ಪಕ್ಕದಲ್ಲಿರುವ ಆಟದ ಮೈದಾನಕ್ಕೆ ಆವರಣ ಗೋಡೆ ನಿರ್ಮಿಸುವ ಕಾಮಗಾರಿಗೆ ರೂ.10.00 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ.
  • ದಾವಣಗೆರೆ ನಗರದ ಪಿ.ಬಿ. ರಸ್ತೆಯಿಂದ ಕುಂದುವಾಡ ರಸ್ತೆ ಕೂಡುವ ರಸ್ತೆಯಲ್ಲಿ ಅಡ್ಡಲಾಗಿ ಬಂದಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ರೂ.10.00 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ.
  • ಮಹಾಯೋಜನೆಯಲ್ಲಿರುವ ದಾವಣಗೆರೆ ನಗರದ ವಾರ್ಡ್ ನಂ: 28 ಕಸ್ತೂರಿ ಬಾ ಬಡಾವಣೆ ಅಜ್ಜಂಪುರ ಶೆಟ್ರು ಲೇಔಟ್ ನಲ್ಲಿರುವ ರಸ್ತೆಯನ್ನು ಶಿವಪ್ಪ ಸರ್ಕಲ್‍ನಿಂದ ನಿಟುವಳ್ಳಿಗೆ ಹೋಗುವ ರಸ್ತೆಯಿಂದ ಕೆ.ಬಿ. ಬಡಾವಣೆಗೆ ಹೋಗುವ ರಸ್ತೆಯ ವರೆಗೆ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ರೂ.23.00 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ.
  • ಮಹಾಯೋಜನೆಯಲ್ಲಿರುವ ದಾವಣಗೆರೆ ನಗರದ ವಾರ್ಡ್ ನಂ: 33ರ ಸರಸ್ವತಿ ನಗರ ಬಿ ಬ್ಲಾಕ್‍ನಲ್ಲಿ ಮನೆ ನಂ: 780/83/2ರ ಮುಂಭಾಗದ ರಸ್ತೆ ಹಾಗೂ ಪಂಚಮುಖಿ ಆಂಜನೇಯ ದೇವಸ್ಥಾನದ ಮುಂಭಾಗದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಕಾಮಗಾರಿಗೆ ರೂ.27.00 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ.
  • ದಾವಣಗೆರೆ ಮಹಾಯೋಜನೆಯಲ್ಲಿರುವ ವಾರ್ಡ್ ನಂ: 33 ಸರಸ್ವತಿ ನಗರ ಬಿ ಬ್ಲಾಕ್ 9ನೇ ಕ್ರಾಸ್‍ನಲ್ಲಿ ಕೆ.ಎಸ್.ಎಸ್. ಕಾಲೇಜು ಹತ್ತಿರ ಇರುವ ಪಾರ್ಕ್ ಅಭಿವೃದ್ಧಿಗಾಗಿ ರೂ.50.00 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ.
  • ದಾವಣಗೆರೆ ಮಹಾಯೋಜನೆಯಲ್ಲಿರುವ ವಾರ್ಡ್ ನಂ: 13 ಶ್ರೀ ಡಿ.ದೇವರಾಜ ಕ್ವಾಟರ್ಸ್ ಹತ್ತಿರ ಇರುವ ಮುಖ್ಯ ರಸ್ತೆಯಲ್ಲಿ ಬೇತೂರು ಮುಖ್ಯ ರಸ್ತೆಯಿಂದ ಇಂದಿರಾ ನಗರ, ಎ.ಕೆ. ಹಟ್ಟಿಯವರೆಗೂ ಸಿ.ಸಿ. ರಸ್ತೆ ನಿರ್ಮಿಸಿ ಎರಡು ಬದಿಯಲ್ಲಿ ಸಿ.ಸಿ. ಚರಂಡಿ ನಿರ್ಮಿಸಿ ಪಾದಚಾರಿ ರಸ್ತೆ ನಿರ್ಮಿಸುವ ಕಾಮಗಾರಿಗಾಗಿ ರೂ.50.00 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ.
  • ಶ್ರೀ ಎಸ್.ನಿಜಲಿಂಗಪ್ಪ ಬಡಾವಣೆಯ ಅಮರ್ ಜವಾನ್ ಉದ್ಯಾನವನದಲ್ಲಿ ಬಯಲು ವೇದಿಕೆ ಮುಂಭಾಗದಲ್ಲಿ ಪೇವರ್ ಅಳವಡಿಸಿ ಅಭಿವೃದ್ಧಿ ಪಡಿಸುವ ಕಾಮಗಾರಿಗಾಗಿ ರೂ.8.00 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ.
  • ಮಹಾಯೋಜನೆಯಲ್ಲಿರುವ ದಾವಣಗೆರೆ ವಾರ್ಡ್ ನಂ: 29 ಆನಗೋಡು ಹೋಟೇಲ್ ನಿಂದ ಡಿ.ಸಿ.ಎಂ. ಕಾಂಪೌಂಡ್ ವರೆಗೂ (ಕೊಟ್ಟೂರೇಶ್ವರ ಬಡಾವಣೆ) ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ.30.00 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ.
  • ಮಹಾಯೋಜನೆಯಲ್ಲಿರುವ ದಾವಣಗೆರೆ ನಗರದ ಬಾಡಾ ಕ್ರಾಸ್‍ನಿಂದ ಬೇತೂರು ಗ್ರಾಮದವರೆಗೆ ರಿಂಗ್ ರಸ್ತೆ ನಿರ್ಮಿಸಲು ಡಿ.ಪಿ.ಆರ್. ತಯಾರಿಸಲು ರೂ.10.00 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ.
  • ಸಭೆಯಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎ.ರವೀಂದ್ರನಾಥ್, ದೂಡಾ ಸದಸ್ಯರುಗಳಾದ ಮಾರುತಿರಾವ್ ಘಾಟ್ಗೆ, ಲಕ್ಷ್ಮಣ, ಬಾತಿ ಚಂದ್ರಶೇಖರ್, ಗೌರಮ್ಮ.ವಿ.ಪಾಟೀಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಸರಗಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಕೆ.ಹೆಚ್.ಶ್ರೀಕರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಪ್ರಾಧಿಕಾರದ ಜಂಟಿ ನಿರ್ದೇಶಕರು, ಸಹಾಯಕ ನಿರ್ದೇಶಕರು ಮತ್ತು ಲೆಕ್ಕಪರಿಶೋಧನಾಧಿಕಾರಿಗಳು ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top