ದಾವಣಗೆರೆ: ತ್ರಿಬಲ್ ರೈಡಿಂಗ್ ದ್ವಿಚಕ್ರ ಸವಾರಿಗೆ ದಾವಣಗೆರೆ ಜಿಲ್ಲಾ ಪೊಲೀಸ್ ಎಚ್ಚರಿಕೆ ನೀಡಿದ್ದು, ವಿಶೇಷ ಕಾರ್ಯಾಚರಣೆ ನಡೆಸಲಿದೆ. ಡಿವೈಎಸ್ಪಿ ನರಸಿಂಹ ವಿ.ತಾಮ್ರಧ್ವಜ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ನಗರದಲ್ಲಿ ತ್ರಿಬಲ್ ರೈಡಿಂಗ್ ಚಾಲನೆ ಮಾಡುವವರ ಬಗ್ಗೆ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ನಾಗರೀಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಸೂಚನೆ ನೀಡಲಾಗಿದೆ.
ನಗರದ ಪಿಬಿ ರಸ್ತೆಯಲ್ಲಿ ದಿನಾಂಕ 18 /4/ 2022 ರಂದು ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್ ಚಾಲನೆ ಮಾಡುತ್ತಿದ್ದ ಚಾಲಕನನ್ನು ಶ್ರೀ ಅನಿಲ್ ಆರ್.ಪಿ., ಸಂಚಾರಿ ವೃತ್ತ ನಿರೀಕ್ಷಕರು ದಾವಣಗೆರೆ ಇವರು ತಡೆದು ನಿಲ್ಲಿಸಿ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ತ್ರಿಬಲ್ ರೆಡ್ಡಿಂಗ್ ಮತ್ತು ಅಜಾಗರೂಕತೆಯ ಮತ್ತು ಅತಿವೇಗದ ಚಾಲನೆ ವಿರುದ್ಧ ದೋಷಾರೋಪಣ ಪತ್ರವನ್ನು ದಕ್ಷಿಣ ಸಂಚಾರ ಠಾಣೆಯಿಂದ ದಾಖಲಿಸಿದ್ದು, ಮಾನ್ಯ ಮೂರನೇ ASCJ ಮತ್ತು JMFC ನ್ಯಾಯಾಲಯವು ಆರೋಪಿತನಿಗೆ ಕಲo 128,184,194 ಭಾರತೀಯ ಮೋಟಾರ್ ಕಾಯ್ದೆಯನ್ವಯ 3300/- ದಂಡ ಹಾಗೂ 3 ತಿಂಗಳು ಚಾಲನಾ ಪತ್ರವನ್ನು ಅಸಿಂಧುಗೊಳಿಸಿದೆ. ಈ ಬಗ್ಗೆ ಘನ ನ್ಯಾಯಾಲಯವು ಆರ್.ಟಿ.ಓ ರವರಿಗೂ ಕೂಡ ನಿರ್ದೇಶನ ನೀಡಿರುತ್ತದೆ.