ಕೇಂದ್ರೀಯ ವಿದ್ಯಾಲಯದ ಒಂದನೇ ತರಗತಿ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿ ವಿಸ್ತರಿಸಲಾಗಿದೆ. ಏಪ್ರಿಲ್ 13ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ..
ಕೇಂದ್ರೀಯ ವಿದ್ಯಾಲಯ ಫೆಬ್ರವರಿ 28,2022 ರಿಂದ ಏಪ್ರಿಲ್ 11,2022ರೊಳಗೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿತ್ತು.ಆದರೆ ಇದೀಗ ಅರ್ಜಿ ಸಲ್ಲಿಕೆಯ ಅವಧಿಯನ್ನು ಏಪ್ರಿಲ್ 13ರ ವರೆಗೆ ವಿಸ್ತರಿಸಲಾಗಿದೆ.
ಒಂದೇ ವಿದ್ಯಾಲಯಕ್ಕೆ ಅನೇಕ ಅರ್ಜಿಗಳನ್ನು ಸಲ್ಲಿಸದಂತೆ ಸಲಹೆ ನೀಡಲಾಗಿದೆ. ಒಂದೇ ಕೇಂದ್ರೀಯ ವಿದ್ಯಾಲಯದಲ್ಲಿ ಒಂದು ಮಗು ಅನೇಕ ಭಾರಿ ನೋಂದಣಿ ನಮೂನೆಗಳನ್ನು ಸಲ್ಲಿಸಿದ್ದಲ್ಲಿ, ಕೊನೆಯ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುತ್ತದೆ.
ಪ್ರವೇಶಾತಿ ಅರ್ಹತಾ ಮಾನದಂಡಗಳು: ಕನಿಷ್ಟ ಆರು ವರ್ಷ ವಯಸ್ಸಿನ ವಿದ್ಯಾರ್ಥಿಗಳನ್ನು ಅರ್ಜಿ ಸಲ್ಲಿಸಲು ಅರ್ಹರು ಎಂದು ಪರಿಗಣಿಸಲಾಗುತ್ತದೆ. ಏಪ್ರಿಲ್ 1 ರಂದು ಜನಿಸಿದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.
- ಅಗತ್ಯವಿರುವ ದಾಖಲೆಗಳು :ಕೇಂದ್ರೀಯ ವಿದ್ಯಾಲಯದಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಡಿಜಿಟಲ್ ಅಥವಾ ಸ್ಕ್ಯಾನ್ ಮಾಡಿದ ಫೋಟೋ (ಗರಿಷ್ಠ ಗಾತ್ರ 256KB ಹೊಂದಿರುವ JPEG ಫೈಲ್)
- ವಿದ್ಯಾರ್ಥಿಯ ಜನನ ಪ್ರಮಾಣಪತ್ರದ ಸ್ಕ್ಯಾನ್ ಮಾಡಿದ ಪ್ರತಿ
- ಆರ್ಥಿಕವಾಗಿ ದುರ್ಬಲ ಉಳ್ಳವರಾಗಿದ್ದಲ್ಲಿ ಸರ್ಕಾರದಿಂದ ಪಡೆದ ಪ್ರಮಾಣ ಪತ್ರಗಳು
- ಪೋಷಕರ/ಗಾರ್ಡಿಯನ್ ಗಳ ವರ್ಗಾವಣೆಯ ಪ್ರಮಾಣ ಪತ್ರಗಳು
- ಕೇಂದ್ರಿಯ ವಿಶ್ವವಿದ್ಯಾಲಯದ ಬಗ್ಗೆ ಹೆಚ್ಚಿನ ಮಾಹಿತಿಗೆ http://kvsangathan.nic.in ವೆಬ್ ಸೈಟ್ ಭೇಟಿ ನೀಡಿ.



