ಡಿವಿಜಿ ಸುದ್ದಿ , ಹಿರೇಕೆರೂರು: ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್ . ಬನ್ನಿಕೋಡ ಪರ ಹಿರೇಕೆರೂರಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭರ್ಜರಿ ಪ್ರಚಾರ ನಡೆಸಿದರು. ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ವಿರುದ್ಧ ಪ್ರತಿ ಮಾತಿನಲ್ಲಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಬಿ.ಸಿ. ಪಾಟೀಲ್ ಹಣದ ಆಸೆಗೆ ಬಿದ್ದು ನನಗೆ ಚೂರಿ ಹಾಕಿದ. ನನ್ನನ್ನ ಸಿದ್ರಾಮಣ್ಣ ಅಂತಿದ್ದ ಪಾಟೀಲ್ ಮೋಸ ಮಾಡಿದ. ಬನ್ನಿಕೋಡ ಮೌಲ್ಯಯುತ ರಾಜಕಾರಣಿ. ಪ್ರಮಾಣಿಕರಾಗಿದ್ದಕ್ಕೆ ಅವರ ಬಳಿ ದುಡ್ಡಿಲ್ಲ.ಇವತ್ತಿನ ಚುನಾವಣೆ ನಡಿತಿರೋದು ಪ್ರಾಮಾಣಿಕ ಬನ್ನಿಕೋಡ ಮತ್ತು ಅಪ್ರಾಮಾಣಿಕ ಪಾಟೀಲ ನಡುವೆ ಎಂದರು.
ಬಿ.ಸಿ.ಪಾಟೀಲ ದುಡ್ಡು ಕೊಟ್ರೆ ತಗೆದುಕೊಳ್ಳಿ. ಅದು ಮುಂಬೈ ನೋಟು. ವೋಟ್ ಮಾತ್ರ ಬನ್ನಿಕೋಡಗೆ ಹಾಕಿ. ಸ್ವಾಭಿಮಾನಕ್ಕಾಗಿ ಬನ್ನಿಕೋಡಗೆ ಮತ ನೀಡಿ ಅಂತಾ ಸಿದ್ದರಾಮಯ್ಯ ಮನವಿ ಮಾಡಿದರು.