ಬೆಂಗಳೂರು: ಕೆಜಿಎಫ್: ಚಾಪ್ಟರ್ 2 ಸಿನಿಮಾದ ತೂಫಾನ್ ವಿಡಿಯೋ ಹಾಡು ಬಿಡುಗಡೆ ಆಗಿದೆ. ಬಿಡುಗಡೆಯಾದ ಒಂದೇ ತಾಸಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಲಿರಿಕಲ್ ಸಾಂಗ್ ನೋಡಿದ ಯಶ್ ಫ್ಯಾನ್ಸ್ಗಳು ಫುಲ್ ಖುಷಿಯಾಗಿದ್ದಾರೆ.
ಭಾರೀ ನಿರೀಕ್ಷಿತ ಹುಟ್ಟು ಹಾಕಿರುವ ಕೆಜಿಎಫ್ ಚಾಪ್ಟರ್ 2 ಇಂದು (ಮಾ. 21) ಬೆಳಗ್ಗೆ 11.07 ಗಂಟೆಗೆ ಮೊದಲ ಲಿರಿಕಲ್ ಸಾಂಗ್ ತೂಫಾನ್ ಬಿಡುಗಡೆ ಮಾಡಲಾಗಿದೆ. ಈವರೆಗೆ ಪೋಸ್ಟರ್ ಮತ್ತು ಒಂದು ಟೀಸರ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಈ ಸಿನಿಮಾ ಈಗ ಮೊದಲ ಸಾಂಗ್ ಬಿಡುಗಡೆ ಮಾಡಿದೆ.
ಈ ಹಾಡನ್ನು ಬಿಡುಗಡೆ ಮಾಡುವ ಬಗ್ಗೆ ಎರಡು ದಿನ ಮುನ್ನವೇ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ತಿಳಿಸಲಾಗಿತ್ತು. ಆಗಲೇ ಜನರ ನಿರೀಕ್ಷೆ ಮುಗಿಲುಮುಟ್ಟಿತ್ತು. ಆ ನಿರೀಕ್ಷೆಗೆ ತಕ್ಕಂತೆಯೇ ಚಿತ್ರದಿಂದ ತೂಫಾನ್ ಹಾಡು ಮೂಡಿಬಂದಿದೆ. ಸಾಂಗ್ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
https://www.youtube.com/watch?v=unWiIzY7pSw
ಈ ಹಾಡಿಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಹಾಡಿನಲ್ಲಿ ಯಶ್ ಅಭಿನಯ ಕಂಡು ಫ್ಯಾನ್ಸ್ ಖುಷಿ ಆಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ವಿಶ್ವದಾದ್ಯಂತ ಸಾಕಷ್ಟು ಸುದ್ದಿ ಮಾಡುತ್ತಿದೆ. ಸೃಷ್ಟಿ ಆಗಲು ಹಲವು ಕಾರಣಗಳಿವೆ.
ರಿಲೀಸ್ ಆದ ಒಂದೇ ತಾಸಿನಲ್ಲಿ ಕನ್ನಡ ವರ್ಷನ್ ತೂಫಾನ್ ಹಾಡು ಲಕ್ಷಾಂತರ ವೀವ್ಸ್ ಪಡೆದುಕೊಂಡಿದೆ. ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲಿಯೂ ‘ಕೆಜಿಎಫ್: ಚಾಪ್ಟರ್ 2’ ಚಿತ್ರ ಬಿಡುಗಡೆ ಆಗಲಿದೆ. ಆ ಎಲ್ಲ ಭಾಷೆಗಳಲ್ಲೂ ‘ತೂಫಾನ್’ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಮಾಡಲಾಗಿದೆ. ಎಲ್ಲ ಭಾಷೆಯಲ್ಲೂ ಜನರಿಂದ ಸಖತ್ ರಿಯಾಕ್ಷನ್ ಸಿಗುತ್ತಿದೆ.
ಏಪ್ರಿಲ್ 14ರಂದು ಕೆಜಿಎಫ್ ಚಾಪ್ಟರ್ 2 ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಸಂಜಯ್ ದತ್, ರವೀನಾ ಟಂಡನ್ ನಟಿಸಿರುವುದರಿಂದ ಬಾಲಿವುಡ್ ವಲಯದಲ್ಲೂ ಕೆಜಿಎಫ್ 2 ಚಿತ್ರ ನಿರೀಕ್ಷೆ ಹೆಚ್ಚಿದೆ. ಯಶ್ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಪ್ರಕಾಶ್ ರಾಜ್, ಮಾಳವಿಕಾ ಅವಿನಾಶ್, ರಮೇಶ್ ಮುಂತಾದ ನಟಿಸಿದ್ದಾರೆ.



