ದಾವಣಗೆರೆ: ಕೃಷಿ ಕ್ಷೇತ್ರದಲ್ಲಿ ರೈತ ಶಕ್ತಿ ಯೋಜನೆ, ನೈಸರ್ಗಿಕ ಕೃಷಿ ಉತ್ತೇಜನೆ, ಸಾವಯವ ಕೃಷಿ ಯೋಜನೆ, ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪನೆ, ಎಲ್ಲಾ ಜಿಲ್ಲೆಗಳಲ್ಲಿ ಮಿನಿ ಆಹಾರ ಪಾರ್ಕ್, ಮೆಣಸು ಮತ್ತು ಮಾವಿನ ಸಂಸ್ಕರಣಾ ಘಟಕ, ಮೆಕ್ಕೆಜೋಳ ಸಂಶೋಧನಾ ಕೇಂದ್ರ, ಕೊಯ್ಲೋತ್ತರ ನಂತರದ ತಾಂತ್ರಿಕತೆಗೆ ಉತ್ತೇಜನ ಈ ಬಾರಿಯ ಬಜೆಟಿನ ಕೃಷಿ ಕ್ಷೇತ್ರದ ಪ್ರಮುಖ ಕೊಡುಗೆಗಳು.
ಪಶುಸಂಗೋಪನೆ ಹಾಗೂ ಮೀನುಗಾರಿಕೆ ಕ್ಷೇತ್ರಕ್ಕೆ ಉತ್ತಮ ನೆರವು ಹಾಗೂ ಕೃಷಿ ಸಮೃದ್ಧಿ ಸಹಕಾರಿ ಬ್ಯಾಂಕ್ ಮತ್ತು ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆಯಿಂದ ರೈತರಿಗೆ ಆರ್ಥಿಕ ಪುನಶ್ಚೇತನ ನೀಡಲು ಸಹಕಾರಿಯಾಗಲಿದೆ ಎಂದು ದಾವಣಗೆರೆಯ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ವನ್ನು ಬಿಟ್ಟರೆ, ಕೃಷಿ ಮತ್ತು ತೋಟಗಾರಿಕೆ ಕಾಲೇಜು ಸ್ಥಾಪನೆಯ ಕನಸು ಈಡೇರಲಿಲ್ಲ. ಜೊತೆಗೆ ಅಡಿಕೆ ಬೆಳೆಯ ಬೆಲೆಯನ್ನು ಸ್ಥಿರವಾಗಿ ರಿಸಲು ಜಿಲ್ಲೆಯಲ್ಲಿ ಅಡಿಕೆ ಬೆಳೆಯ ಉಪ ಉತ್ಪನ್ನಗಳು ಮತ್ತು ಸಂಸ್ಕರಣಾ ಘಟಕದ ಸ್ಥಾಪನೆಯ ಬೇಡಿಕೆ ಈಡೇರಿಲ್ಲ.