ದಾವಣಗೆರೆ: ಕಳೆದ ಬಾರಿಯಂತೆ ಈ ಬಾರಿಯೂ ಬಿಜೆಪಿಯ ಮ್ಯಾಜಿಕ್ ವರ್ಕೌಟ್ ಆಗಿದ್ದು, ಮತ್ತೊಮ್ಮೆ ಬಿಜೆಪಿ ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಕ್ಕೇರಿದೆ. ಇನ್ನು ಕಾಂಗ್ರೆಸ್ ಹೆಚ್ಚು ಸದಸ್ಯರನ್ನು ಹೊಂದಿದ್ದರೂ ಅಧಿಕಾರಕ್ಕೇರಲು ಸಾಧ್ಯವಾಗಿಲ್ಲ.
ದಾವಣಗೆರೆ ಮಹಾ ನಗರಪಾಲಿಕೆ 30ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಆರ್. ಜಯಮ್ಮ ಗೋಪಿನಾಯ್ಕ ಹಾಗೂ ಉಪಮೇಯರ್ ಆಗಿ 8ನೇ ವಾರ್ಡ್‌ನ ಬಿಜೆಪಿಯ ಗಾಯಿತ್ರಮ್ಮ ಖಂಡೋಜಿರಾವ್ 3ನೇ ಅವಧಿಗೆ ಆಯ್ಕೆಯಾಗಿದ್ದಾರೆ.
ಬಿಜೆಪಿಗೆ 18 ಸದಸ್ಯರು, 4 ಪಕ್ಷೇತರರು, ಒರ್ವ ಶಾಸಕ, ಸಂಸದ ಹಾಗೂ 5 ವಿಧಾನ ಪರಿಷತ್ ಸದಸ್ಯರು ಸೇರಿ 29 ಸದಸ್ಯ ಬಲ ಹೊಂದಿತ್ತು. ಕಾಂಗ್ರೆಸ್‌ನಲ್ಲಿ 21 ಪಾಲಿಕೆ ಸದಸ್ಯರು, ಒಬ್ಬರು ಪಕ್ಷೇತರ, ಒಬ್ಬರು ಶಾಸಕರು, ಇಬ್ಬರು ವಿಧಾನಪರಿಷತ್ ಸದಸ್ಯರು ಸೇರಿ 25 ಸದಸ್ಯ ಬಲವಿದ್ದ ಕಾರಣ ಬಿಜೆಪಿ ಗೆಲುವಿನ ನಗೆ ಬೀರಿದೆ.
ಬಿಜೆಪಿಯ ಹಾಲಿ ಉಪಮೇಯರ್ ಆಗಿದ್ದ ಶಿಲ್ಪಾ ಜಯಪ್ರಕಾಶ್ ಮೇಯರ್ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರು. ಹೊಸಬರಿಗೆ ಅವಕಾಶ ನೀಡುವ ದೃಷ್ಟಿಯಿಂದ ಜಯಮ್ನ ಅವರನ್ನು ಕಣಕ್ಕಿಳಿಸಿದ್ದರು. ಕಳೆದ ಬಾರಿ ಕಾಂಗ್ರೆಸ್ ಬೆಂಬಲಿಸಿದ್ದ ಜೆಡಿಎಸ್ ಅಭ್ಯರ್ಥಿ, ಈ ಬಾರಿ ಗೈರು ಆಗಿದ್ದರು.



