ದಾವಣಗೆರೆ: ನಗರದ ಹೊರ ವಲಯದ ಹಳೇ ಕುಂದುವಾಡದಲ್ಲಿ ದೂಢಾ ನಿರ್ಮಿಸಲು ಉದ್ದೇಶಿಸಿರುವ ನೂತನ ಬಡಾವಣೆಗೆ ಜಮೀನು ನೀಡುವ ರೈತರಿಗೆ ಎಕರೆಗೆ 1.28 ಕೋಟಿ ಹಾಗೂ ಒಂದು ಒಂದು ಸೈಟ್ ಗೆ ಕೊಡಲು ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ರೈತರೊಂದಿಗೆ ನಡೆದ ಸಭೆ ಈ ನಿರ್ಣಯ ಕೈಗೊಳ್ಳಲಾಯಿತು. ಡಿಸಿ ಮಹಾಂತೇಶ್ ಬೀಳಗಿ ಅಧ್ಯಕ್ಷತೆ ವಹಿಸಿದಗದರು. ಹಳೇ ಕುಂದುವಾಡ ಬಳಿ ದೂಢಾ ಲೇಔಟ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈ ಹಿಂದೆ ಪ್ರತಿ ಎಕರೆಗೆ 1.18 ಕೋಟಿ ದರ ನಿಗದಿ ಮಾಡಲಾಗಿತ್ತು. ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ರೈತರ ಒಪ್ಪಿಗೆ ಮೇರೆಗೆ ದರ ನಿಗದಿ ಮಾಡಲಾಗಿದೆ.
ನೂತನ ಬಡಾವಣೆ ಡಿಸಿ ಕಚೇರಿಯಿಂದ ಕೇವಲ ನಾಲ್ಕು ಕಿಲೋ ಮೀಟರ್ ಮಾತ್ರ ದೂರವಿದೆ.ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಮೀನುಗಳಿದ್ದು, ಉತ್ತಮ ದರ ನೀಡಿ ಎಂದು ರೈತರ ಮನವಿ ಮಾಡಿದರು. ಡಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ 1.28 ಕೋಟಿ ರೂ. ದರ ಹಾಗೂ ಒಂದು ಸೈಟ್ ನೀಡಲು ತೀರ್ಮಾನಿಸಲಾಯಿತು.
ದರ ನಿಗದಿ ಕುರಿತು ಸರ್ಕಾರದ ಅನುಮತಿ ಪಡೆಯುತ್ತೇವೆ. ಒಪ್ಪಿಗೆ ಬಳಿಕ ಜಮೀನು ಖರೀದಿಸಿ ಲೇ ಔಟ್ ನಿರ್ಮಾಣ ಪ್ರಕ್ರಿಯೆ ನಡೆಯಲಿದೆ.ಬಡವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸೈಟ್ ಹಂಚಿಕೆ ಮಾಡುತ್ತೇವೆ ಎಂದು ಡಿಸಿ ತಿಳಿಸಿದರು.
ಈ ಸಂದರ್ಭದಲ್ಲಿ ರೈತರಾದ ಮಿಟ್ಲಕಟ್ಟೆ ಚಂದ್ರಪ್ಪ, ನರಸಪ್ಪರ ಶಿವಪ್ಪ, ಜೆಸಿ ದೇವರಾಜ್, ಜೆ ಮಾರುತಿ, ಮಧುನಾಗರಾಜ್ ಕುಂದುವಾಡ, ಜಯ್ಯಪ್ಪ, ಸೋಮಣ್ಣ, ಷಣ್ಮುಖಪ್ಪ, ಮಲ್ಲಿಕಾರ್ಜುನ್, ಮಹಾಂತೇಶ್, ರೇವಣ್ಣಪ್ಪ ಸೇರಿದಂತೆ ಮತ್ತಿರರಿದ್ದರು.



