ಡಿವಿಜಿ ಸುದ್ದಿ, ದಾವಣಗೆರೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ನ. 25 ರಂದು ಸೋಮವಾರ ಜಿಲ್ಲೆಯಲ್ಲಿ ಬೃಹತ್ ಅರೆ ಬೆತ್ತಲೆ ಪ್ರತಿಭಟನೆ ನಡೆಯಲಿದೆ.
ಬಾಬ ಸಾಹೇಬ್ ಡಾ ಬಿಆರ್ ಅಂಬೇಡ್ಕರ್ ರವರೊಬ್ಬರೆ ಸಂವಿಧಾನವನ್ನು ಬರೆದಿಲ್ಲ ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ರವರು ಹೇಳಿದ್ದಾರೆ. ಇನ್ನು ಮೀಸಲಾತಿ ಕೊನೆಗಾಣಿಸಲಿಕ್ಕೆ ನಾನು ಪ್ರಧಾನ ಮಂತ್ರಿ ನರೇಂದ್ರಮೋದಿ ರವರಿಗೆ ಪತ್ರ ಬರೆದಿರುವೆ ಎಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹೇಳಿರುವ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪತಾಂಜಲಿಯ ಬಾಬಾ ರಾಮ್ ದೇವ ಟಿವಿ ಸಂದರ್ಶನವೊಂದರಲ್ಲಿ ಪೆರಿಯಾರ್ ಮತ್ತು ಅಂಬೇಡ್ಕರ್ ರವರಿಬ್ಬರೂ ದೇಶದ್ರೋಹಿಗಳು ಎಂದು ಹೇಳಿಕೆ ನೀಡಿದ್ದಾರೆ. ಈ ಎಲ್ಲಾ ಖಂಡಿಸಿ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ಈ ನಿರ್ಣಾಯ ಕೈಗೊಳ್ಳಲಾಗಿದೆ. ಈ ಅರೆಬೆತ್ತಲೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿಸಬೇಕೆಂದು ಸಮಸ್ತ ದಸಂಸ ಕಾರ್ಯಕರ್ತರಲ್ಲಿ ಕುಮಾರ್ ಕೋಗಲೂರು ಮನವಿ ಮಾಡಿದರು.
ಈ ಸಭೆಯಲ್ಲಿ ಜಿಗಳೆ ಹಾಲೇಶ್ , ಶ್ರೀ ಮತಿ ವಿಜಯಮ್ಮ , ಚೌಡಪ್ಪ , ಮಹಾಂತೇಶ್ , ಪರಮೇಶ ಕೆಟಿಜೆ ನಗರ , ಹನುಮಂತಪ್ಪ ಅಣಜಿ ಸೇರಿದಂತೆ ಅನೇಕ ದಸಂಸ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.



