ಬೆಂಗಳೂರು: ಹಿಂದುಸ್ಥಾನ್ ಏರೋನಾಟಿಕಲ್ ಲಿಮಿಟೆಡ್ನ (ಎಚ್ಎಎಲ್) ಕಾನ್ಪುರ ಘಟಕದಲ್ಲಿ ಅಪ್ರೆಂಟೀಸ್ ತರಬೇತಿ ನೀಡಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈಗಾಗಲೇ ಅಪ್ರೆಂಟೀಸ್ ತರಬೇತಿ ಪಡೆದಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಅಪ್ರೆಂಟೀಸ್ ಆಕ್ಟ್ 1961ರ ನಿಯಮದನ್ವಯ ಐಟಿಐ ಟ್ರೇಡ್ ಹಾಗೂ ವೊಕೇಷನಲ್ ಅಪ್ರೆಂಟೀಸ್ಗೆ ಸ್ಟೈಪೆಂಡ್ ನೀಡಲಾಗುವುದು. ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಕೇಳಲಾಗಿದೆ. ಯುದ್ಧ ವಿಮಾನ, ಲಘು ಯುದ್ಧ ವಿಮಾನ, ಹೆಲಿಕಾಪ್ಟರ್ ಹಾಗೂ ವೈಮಾನಿಕ ತರಬೇತಿ ಸಾಧನಗಳ ಉತ್ಪಾದನೆಯಲ್ಲಿ ತೊಡಗಿರುವ ಎಚ್ಎಎಲ್, ತಂತ್ರಜ್ಞಾನ ಆವಿಷ್ಕಾರ, ಉತ್ಪಾದನೆ, ವಿನ್ಯಾಸ ಹಾಗೂ ತರಬೇತಿ ಮೊದಲಾದ ಕಾರ್ಯಗಳನ್ನು ದೇಶದ ವಿವಿಧೆಡೆ ಇರುವ ಘಟಕಗಳಲ್ಲಿ ನಡೆಸುತ್ತದೆ.
ಫಿಟ್ಟರ್, ಟರ್ನರ್, ಮಷಿನಿಸ್ಟ್, ವೆಲ್ಡರ್, ಎಲೆಕ್ಟ್ರಾನಿಕ್ಸ್ ಮೆಕಾನಿಕ್, ಎಲೆಕ್ಟ್ರಿಷಿಯನ್, ಇನ್ಸ್ಟ್ರುಮೆಂಟ್ ಮೆಕಾನಿಕ್, ರೆಫ್ರಿಜರೇಟರ್ ಆಂಡ್ ಎ/ಸಿ ಮೆಕಾನಿಕ್, ಡ್ರಾಫ್ಟ್ಮೆನ್ (ಮೆಕಾನಿಕಲ್, ಸಿವಿಲ್), ಸಿಒಪಿಎ, ಟೈಲರ್ (ಪುರುಷ), ಫೈಂಟರ್, ಕಾರ್ಪೆಂಟರ್, ಆಟೋಮೊಬೈಲ್ (ಮೋಟಾರ್ ಮೆಕಾನಿಕ್) ವಿಭಾಗಗಳಲ್ಲಿ ಐಟಿಐ ತರಬೇತಿ ನೀಡಲಾಗುವುದು. ಅಕೌಂಟೆನ್ಸಿ, ಸ್ಟೆನೋ, ಹೆಲ್ತ್ ವರ್ಕರ್, ಆಡಿಯೋ ವಿಷುವಲ್, ಆಟೋಮೊಬೈಲ್ ವಿಭಾಗದಲ್ಲಿ ವೆಕೇಷನಲ್ ಟ್ರೇಡ್ ತರಬೇತಿ ನೀಡಲಾಗುವುದು.
ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ಶಿಕ್ಷಣ ಪಡೆದಿರಬೇಕು. ತರಬೇತಿ ಪಡೆದುಕೊಳ್ಳಲು ಇಚ್ಛಿಸುವ ವಿಭಾಗದ ವಿಷಯದಲ್ಲಿ ಐಟಿಐ ತರಬೇತಿ ಪಡೆದಿರಬೇಕು. ಪೂರ್ಣಾವಧಿಯಲ್ಲಿ ಪಡೆದ ಶಿಕ್ಷಣಕ್ಕೆ ಮಾತ್ರ ಮಾನ್ಯತೆ ಎಂದು ತಿಳಿಸಲಾಗಿದೆ. ಅಭ್ಯರ್ಥಿಗಳು ಐಟಿಐ ಅನ್ನು 2019, 2020 ಮತ್ತು 2021ರ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾಗಿರಬೇಕು. 2019ಕ್ಕಿಂತ ಹಿಂದೆ ಉತ್ತೀರ್ಣರಾದವರಿಗೆ, ಸೆಂಟರ್ ಆಫ್ ಎಕ್ಸ್ಲೆನ್ಸ್ (ಸಿಒಇ) ಕೋರ್ಸ್ ಮಾಡಿರುವ ಅಭ್ಯರ್ಥಿಗಳಿಗೂ ಅವಕಾಶ ಇಲ್ಲ ಎಂದು ತಿಳಿಸಲಾಗಿದೆ.
25.1.2022ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ. ಅಭ್ಯರ್ಥಿಗಳು ಎಚ್ಎಎಲ್ ಅಪ್ರೆಂಟೀಸ್ಶಿಪ್ಗೆ ಅರ್ಜಿ ಸಲ್ಲಿಸಬೇಕೆಂದಿದ್ದರೆ ಮೊದಲು ನೋಂದಾವಣಿ ಸಂಖ್ಯೆ ಪಡೆದಿರಬೇಕು. ಅರ್ಜಿ ಸಲ್ಲಿಸಲು 25.1.2022 ಕೊನೇ ದಿನ. ವಿಳಾಸ: The Chief Manager (Technical Training Institute), Hindustan Aeronautics Ltd., Transport Aircraft Division, Post Office- Chakeri, Kanpur (208008) ಮಾಹಿತಿಗೆ:https://hal-india.co.in.