ದಾವಣಗೆರೆ: ಸರಸ್ವತಿ, ತ್ರಿಶೂಲ್ ಮತ್ತು ಡಿ.ಸಿ.ಎಂ. ಫೀಡರ್ ನಲ್ಲಿ ಜಲಸಿರಿ ಯೋಜನೆಯಡಿ ನಿರಂತರ ಶುದ್ದ ಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇಂದು (ಜ.17) ಬೆಳಗ್ಗೆ 10 ರಿಂದ ಸಂಜೆ 04 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಸರಸ್ವತಿ ಫೀಡರ್: ಸರಸ್ವತಿ ಬಡಾವಣೆ ಎ ಮತ್ತು ಬಿ ಬ್ಲಾಕ್, ಜಯನಗರ ಎ, ಬಿ ಮತ್ತು ಸಿ ಬ್ಲಾಕ್, ಭೂಮಿಕಾ ನಗರ, ಜೆ,ಎನ್ ಕಾನ್ವೇಂಟ್, ಕೆಎಸ್‍ಎಸ್ ಕಾಲೇಜ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ತ್ರಿಶೂಲ್ ಫೀಡರ್ : ಪಿ ಬಿ ರೋಡ್, ರಿಲಯನ್ಸ್ ಮಾರ್ಕೆಟ್, ಸುಲ್ತಾನ್ ಡೈಮೈಂಡ್ಸ್, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಡಿ.ಸಿ.ಎಂ. ಫೀಡರ್ : ಶಕ್ತಿನಗರ, ರಾಜೇಂದ್ರ ಬಡಾವಣೆ, ಜಯನಗರ ಬಿ ಬ್ಲಾಕ್, ಬನಶಂಕರಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಕೆ.ಟಿ.ಜೆ ಫೀಡರ್: ಶಿವಪ್ಪ ಸರ್ಕಲ್, ಸ್ವಾಮಿ ಶಿವಯೋಗಿ ಕಾಂಪೌಂಡ್ ಮತ್ತು ಕೆ.ಟಿ.ಜೆ. ನಗರ 1 ರಿಂದ 17ನೇ ಕ್ರಾಸ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಲಿದೆ.



