ದಾವಣಗೆರೆ: ನಗರದ ಚೌಕಿಪೇಟೆಯಲ್ಲಿರುವ ಶ್ರೀ ಗುರು ಬಕ್ಕೇಶ್ವರ ಸ್ವಾಮಿಗೆ ಶಾಮನೂರು ಶಿವಶಂಕರಪ್ಪ ಕುಟುಂಬದಿಂದ ಬಂಗಾರದ ಚೌಕ ಹಾಗೂ ಕಾಣಿಕೆಯನ್ನು ಸಮರ್ಪಿಸಲಾಯಿತು.
ಇಂದು ಸಂಜೆ ಶಾಸಕ ಶಾಮನೂರು ಶಿವಶಂಕರಪ್ಪ ಚೌಕ ಹಾಗೂ ಕಾಣಿಕೆಯನ್ನು ಸಮರ್ಪಿಸಿ ಸ್ವಾಮಿಯ ಆರ್ಶಿವಾದ ಪಡೆದರು. ಈ ವೇಳೆ ಪುತ್ರ ಉದ್ಯಮಿ ಎಸ್.ಎಸ್.ಗಣೇಶ್, ಡಾ.ಎಸ್.ಬಿ.ಮುರುಗೇಶ್, ಸೊಸೆಯಂದಿರಾದ ಪ್ರೀತಿ ಬಕ್ಕೇಶ್, ರೇಖಾ ಗಣೇಶ್, ಪ್ರಭಾ ಮಲ್ಲಿಕಾರ್ಜುನ, ಅಭಿಷೇಕ್, ಉದ್ಯಮಿ ಅಥಣಿ ವೀರಣ್ಣ ದಂಪತಿ, ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ, ಶ್ರೀ ಗುರು ಬಕ್ಕೇಶ್ವರ ಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಮಾಗಾನಹಳ್ಳಿ ಶಿವಾನಂದಪ್ಪ, ಉಪಾಧ್ಯಕ್ಷ ಜಯಣ್ಣ, ಖಜಾಂಚಿ ವಿನಯ್ ಮತ್ತಿತರರಿದ್ದರು.



