ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಮಹಾ ಸ್ಟೋಟ ಸಂಭವಿಸಿದ್ದು, ಒಂದೇ ದಿನ 102 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಅದರಲ್ಲಿ ಚನ್ನಗಿರಿ ತಾಲ್ಲೂಕು ಒಂದರಲ್ಲಿಯೇ 53 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಚನ್ನಗಿರಿಯ ವಸತಿಯ ಪ್ರಾಚಾರ್ಯ ಸೇರಿ 46 ವಿದ್ಯಾರ್ಥಿಗಳು, 07 ಸಾರ್ವಜನಿಕರು ಸೇರಿ ಒಟ್ಟು 53 ಮಂದಿಯಲ್ಲಿ ಪ್ರಕರಣ ಪತ್ತೆಯಾಗಿದೆ. ದಾವಣಗೆರೆ 34, ಹರಿಹರ 02, ಜಗಳೂರು 06, ಹೊನ್ನಾಳಿ 02, ಹೊರ ಜಿಲ್ಲೆಯ 05 ಮಂದಿಯಲ್ಲಿ ಸೋಂಕು ಪತ್ತೆರಯಾಗಿದೆ. ಜಿಲ್ಲೆಯಲ್ಲಿ ಸದ್ಯ 148 ಸಕ್ರಿಯ ಪ್ರಕರಣಗಳಿದ್ದು, ಇಂದು ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.



