ದಾವಣಗೆರೆ: ಪ್ರತಿ ವಾರದಂತೆ ಇಂದು ನಗರದಲ್ಲಿ ಭಾನುವಾರ ಸಂತೆ ಇರಲ್ಲ. ವಾರಾಂತ್ಯದ ಕರ್ಫ್ಯೂ ಕಾರಣಕ್ಕೆ ಭಾನುವಾರದ ಸಂತೆಯನ್ನು ರದ್ದು ಪಡಿಸಲಾಗಿದ್ದು, ತಳ್ಳುವ ಗಾಡಿಯಲ್ಲಿ ತರಕಾರಿ ಹಣ್ಣು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸಂತೆ ರದ್ದು ಮಾಡಿದ್ದರೂ ತರಕಾರಿ, ಹಣ್ಣು, ಮೀನು, ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂತೆ ಪ್ರದೇಶದಲ್ಲಿ ಗುಂಪು, ಗುಂಪಾಗಿ ಸೇರಿ ತರಕಾರಿ ಮಾರಾಟ ಮಾಡಲು ಅವಕಾಶವಿಲ್ಲ. ತಳ್ಳುವ ಗಾಡಿಯ ಮೂಲಕ ನಿಂತು ತರಕಾರಿ, ಹಣ್ಣು ಮಾರಾಟ ಮಾಡಬಹುದು. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.



