ಬೆಂಗಳೂರು: ನಗರದ ಕೋಣನ ಕುಂಟೆ ಕ್ರಾಸ್ ಬಳಿ ನಿರ್ಮಾಣ ಹಂತದ ಕಟ್ಟಡದಲ್ಲಿ ಇಂದು ಭಾರಿ ಅಗ್ನಿ ಅವಘಡ ಸಂಭವಿಸಿದೆ. ಇದರಿಂದ ಸುತ್ತಲೂ ದಟ್ಟ ಹೊಗೆ ಆವರಿಸಿದೆ. ಥಿಯೇಟರ್ ನಿರ್ಮಾಣಕ್ಕೆ ಧರ್ಮಾಕೋಲ್ ಬಳಸಿ ಕೆಲಸ ಮಾಡುತ್ತಿರುವಾಗ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ.
ಭಾರೀ ಪ್ರಮಾಣದಲ್ಲಿ ದಟ್ಟ ಹೊಗೆ ವ್ಯಾಪಿಸುತ್ತಿದ್ದಂತೆ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಿರ್ಮಾಣ ಹಂತದ ಮಾಲ್ ಇದಾಗಿದ್ದು, ಕಾರ್ಮಿಕರು ಅವಘಡ ನಡೆಯುವ ವೇಳೆ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಯಾವುದೇ ಸಾವಿನ ಬಗ್ಗ ಇನ್ನು ವರದಿಯಾಗಿಲ್ಲ.



