ದಾವಣಗೆರೆ: ಜಿಲ್ಲೆಯಾದ್ಯಂತ ಇಂದಿನಿಂದ ಟೈಟ್ ನೈಟ್ ಕರ್ಫ್ಯೂ ಜ.19 ವರೆಗೆ ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ಜಾರಿಯಲ್ಲಿದೆ. ಇದರ ಜತೆಗೆ ಈ ವಾರದಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದ್ದು, ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಗ್ಗೆ 5ರವರೆಗೆ ಇರಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಸಭೆ ನಂತರ ಮಾತನಾಡಿದ ಅವರು, ಇಂದಿನಿಂದ ಸ್ವಾಬ್ ಪರೀಕ್ಷೆಯೂ ಹೆಚ್ಚಾಗುತ್ತದೆ. ಅನ್ಯ ರಾಜ್ಯಗಳಿಂದ ಪ್ರವೇಶಿಸುವವರು ಪ್ರವೇಶಿಸುವವರು ಸರ್ಕಾರ ಮಾರ್ಗಸೂಚಿ ಅನುಸರಿಸಬೇಕು. ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದರು.
ಕೋವಿಡ್‌ಗೆ ಸಮರೋಪಾದಿ ಸಿದ್ಧತೆ ಮಾಡಲಾಗಿದ್ದು, ಜಿಲ್ಲೆಯಲ್ಲಿ 3,000 ಬೆಡ್‌ಗಳು ಕೋವಿಡ್‌ಗೆ ಮೀಸಲಿಡಲಾಗಿದೆ. ಸಾರ್ವಜನಿಕ ಆಸ್ಪತ್ರೆಯ ಶೇ. 75ರಷ್ಟು ಬೆಡ್ ಮೀಸಲಿಟ್ಟಿದ್ದೇವೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50ರಷ್ಟು ಬೆಡ್ ಇಡಲಾಗಿದೆ.ಜೀನೋಮ್ ಸಿಕ್ವನ್ಸ್ ಟೆಸ್ಟಿಂಗ್ ಲ್ಯಾಬ್ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಸೋಂಕು ಎದುರಿಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ. ಜ.10ರಿಂದ ಬೂಸ್ಟರ್ ಡೋಸ್ ಆರಂಭಮಾಡಲಾಗುವುದು.ಕೊರೊನಾ ವಾರಿಯರ್ಸ್ ಮೊದಲು ಬೂಸ್ಟರ್ ಡೋಸ್ ನೀಡಲಾಗುವುದು ಎಂದರು.
ವೀಕೆಂಡ್ ಕರ್ಫ್ಯೂ ವೇಳೆ ಔಷಧ, ಆಸ್ಪತ್ರೆ, ಹಣ್ಣು, ಹಾಲು, ತರಕಾರಿ, ಮಾಂಸ, ಮೀನು, ನ್ಯಾಯ ಬೆಲೆ ಅಂಗಡಿ, ಪಶು ಆಹಾರ ಅಂಗಡಿ, ಹೋಟೆಲ್‌ಗಳಲ್ಲಿ ಪಾರ್ಸಲ್ ಸೇವೆ, ತಳ್ಳು ಗಾಡಿಯಲ್ಲಿ ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಪಾರ್ಕ್, ಮದ್ಯ, ಚಿನ್ನಾಭರಣ ಅಂಗಡಿ, ಶಾಲೆ, ಕಾಲೇಜು ಇರುವುದಿಲ್ಲ ಎಂದು ತಿಳಿಸಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಮಾತನಾಡಿ, ಇಂದಿನಿಂದ 19ರವರೆಗೆ ನೈಟ್ ಕರ್ಫ್ಯೂ ಮುಂದುವರಿಯಲಿದೆ. ಈ ವೇಳೆ ಯಾವುದೇ ರ್ಯಾ ಲಿ, ಧರಣಿ, ಪ್ರತಿಭಟನೆ, ಜಾತ್ರೆ ಸಮಾರಂಭಗಳಿಗೆ ಅವಕಾಶ ಇರುವುದಿಲ್ಲ. ಹೊರಾಂಗಣದ ಮದುವೆಗೆ 200 ಜನರ ಮಿತಿ ಹಾಗೂ
ಒಳಾಂಗಣದ ಮದುವೆಗೆ 100 ಜನ ಮಿತಿ ಇರಲಿದೆ. ಇನ್ನು ಥೇಟರ್‌ಗಳಲ್ಲಿ ಶೇ. 50 ರಷ್ಟು ಅವಕಾಶ ನೀಡಲಾಗಿದೆ. ದೇವಸ್ಥಾನಗಳಲ್ಲಿ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ತೀರ್ಥ-ಪ್ರಸಾದ ವಿತರಣೆ ಇಲ್ಲ ಅವಕಾಶವಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದಿದ್ರೆ ಹಾಗೂ ಕೋವಿಡ್ ನಿಯಮ ಉಲ್ಲಂಘನೆಗೆ ದಂಡ ಹಾಕಲಾಗುವುದು ಎಂದರು.



