ದಾವಣಗೆರೆ: ಹಿಟ್ಟಿನ ಗಿರಣಿ ಮಾಲೀಕನಿಂದ ಲಂಚ ಸ್ವೀಕರಿಸುವಾಗಲೇ ಬೆಸ್ಕಾಂ ಲೈನ್ ಮ್ಯಾನ್ ಭ್ರಷ್ಟಾಚಾರ ನಿಗ್ರಹ ದಳ (ACB) ಬಲೆಗೆ ಬಿದ್ದಿದ್ಧಾನೆ.
ಬೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಕಚೇರಿಯ ಎಂಟಿ ಉಪವಿಭಾಗದ ಲೈನ್ ಮಾನ್ಯಾನ್ ರವಿಕುಮಾರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿಯಾಗಿದ್ಧಾರೆ. ಶ್ರಿರಾಮ್ ಎಂಬುವರ ಹಿಟ್ಟಿನ ಗಿರಣಿಯ ಹಿಂಬಾಕಿ ಬಿಲ್ ಗೆ 15 ಸಾವಿರ ದಂಡ ವಿಧಿಸಿದ್ದರು. ದಂಡವನ್ನು ಸರಿಪಡಿಸಲು ರವಿಕುಮಾರ್ ಐದು ಸಾವಿರ ಬೇಡಿಕೆ ಇಟ್ಟಿದ್ದರು.
ಈ ಕುರಿತು ಹಿಟ್ಟಿನ ಗಿರಣಿ ಮಾಲೀಕ ಶ್ರೀರಾಮ್ ಎಸಿಬಿ ಗೆ ದೂರು ಸಲ್ಲಿಸಿದ್ದರು. ಇಂದು ಬೆಳಗ್ಗೆ ಕಚೇರಿ ಆವರಣದಲ್ಲಿರುವ ಗಣೇಶ ದೇವಸ್ಥಾನದ ಬಳಿ 5 ಸಾವಿರ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ರವಿಕುಮಾರ್ ನನ್ನು ವಶಕ್ಕೆ ಪಡೆದಿದ್ದಾರೆ.