ದಾವಣಗೆರೆ: ಹೆಣ್ಣು ಮಗು ಹುಟ್ಟಿದೆಂದು ಮಗುವನ್ನು ಮೇಲಿಂದ ನೆಲಕ್ಕೆ ಬಿಟ್ಟು ಕೊಂದು ಕೀಚಕ ತಂದೆಗೆ ಜನರು ಮನಬಂದಂತೆ ಥಳಿಸಿ ಮೆರವಣಿಗೆ ಮಾಡಿರುವ ಘಟನೆ ನಗರದ ಅಖ್ತರ್ ರಜಾ ವೃತ್ತದ ಬಳಿ ನಡೆದಿದೆ.
ಮನ್ಸೂರ್ ಎಂಬ ವ್ಯಕ್ತಿ ತನ್ನ ಮಗಳ ಪ್ರಾಣ ತೆಗೆದಿದ್ದ ಕೀಚಕ ತಂದೆಯಾಗಿದ್ದಾನೆ. ದಾವಣಗೆರೆ ನಗರದ ಮಿಲ್ಲತ್ ಕಾಲೋನಿಯ ನಿವಾಸಿಯಾಗಿದ್ದು, ಮಿಲ್ಲತ್ ಕಾಲೋನಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ ಮನಕಲಕುವ ಪ್ರಕರಣ ನಡೆದಿತ್ತು. ಅಂದು ನಡೆದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದ್ದು, ಮಗಳನ್ನು ಸಾಯಿಸಿದ್ದಾನೆ ಎಂಬ ಕಾರಣಕ್ಕೆ ಸ್ಥಳೀಯರು, ಮನ್ಸೂರ್ ಹಾಗು ಆತನ ತಮ್ಮ ಮೈನುದ್ದೀನ್‌ನನ್ನು ಹಿಗ್ಗಾಮುಗ್ಗ ಥಳಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿದ್ದಾರೆ.
ಅಖ್ತರ್ ರಜಾ ವೃತ್ತದಿಂದ ಬಾಷಾ ನಗರದ ವರೆಗ ಮೆರವಣಿಗೆ ಮಾಡಿದ್ದಾರೆ. ಈ ಹಿಂದೆ ಮಸೀದಿ ಜಮಾಯತ್?ನಿಂದ ಪಂಚಾಯಿತಿ ಮಾಡಲು ಸಭೆ ಕರೆಯಲಾಗಿತ್ತು. ಸಭೆಗೆ ಆರೋಪಿ ಬಾರದ ಹಿನ್ನೆಲೆ ಜನರು ಮನ್ಸೂರ್? ಹಾಗೂ ಆತನ ತಮ್ಮ ಮೈನುದ್ದೀನ್ ಅನ್ನು ಹಿಡಿದು ಜಮಾಯತ್ ಬಳಿ ಕರೆ ತಂದಿದ್ದಾರೆ. ಸಹೋದರನಾಗಿರುವ ಕಾಂಗ್ರೆಸ್ ಮುಖಂಡ ಮೈನುದ್ದೀನ್ ಇದರಲ್ಲಿ ಭಾಗಿಯಾಗಿದ್ದಾನೆಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಮೈನುದ್ದೀನ್ ಆತನ ಅಣ್ಣ ಮನ್ಸೂರ್ ಇಬ್ಬರನ್ನು ಸಾರ್ವಜನಿಕರು ಥಳಿಸಿದ್ದಾರೆ. ಮೂರು ತಿಂಗಳ ಹಿಂದೆ ಹಲ್ಲೆ ಮಾಡಿದ್ದ ವೇಳೆ ಅಸ್ವಸ್ಥಗೊಂಡ ಮಗುವನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಮಗು ಬದುಕಿರಲಿಲ್ಲ. ಇದರಿಂದ ಆಕ್ರೋಶಗೊಂಡ ಜನ ಆರೋಪಿಗಳನ್ನು ಮೆರವಣಿಗೆ ಮಾಡಿಸಿದ್ದಾರೆ. ಘಟನೆ ಕುರಿತು ಮೂರು ತಿಂಗಳ ಬಳಿಕ ಸತ್ಯ ಹೊರ ಬಂದಿದ್ದು, ಹಲ್ಲೆ ಮಾಡಿದ್ದ ವಿಡಿಯೋ ವೈರಲ್ ಆಗಿದೆ.



