ದಾವಣಗೆರೆ: ಸಿಜಿಹೆಚ್ ಮತ್ತು ಎಸ್.ಎಸ್. ಹೈಟೆಕ್ ಫೀಡರ್ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇಂದು ಡಿ.15 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಸ್.ಎಸ್. ಹೈಟೆಕ್ ಫೀಡರ್ ವ್ಯಾಪ್ತಿಯ ಎಸ್.ಓ.ಜಿ ಕಾಲೋನಿ ಎ, ಬಿ & ಸಿ ಬ್ಲಾಕ್, ಬುದ್ದ ಬಸವ ಭೀಮ ನಗರ, ಕರ್ನಾಟಕ ಬೀಜ ನಿಗಮ, ರಾಮನಗರ, ಇಂಡಸ್ಟ್ರೀಯಲ್ ಏರಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಿ.ಜಿ.ಹೆಚ್. ಫೀಡರ್ ವ್ಯಾಪ್ತಿಯ ಪಿ.ಜೆ. ಬಡಾವಣೆಯ 6,7, 8ನೇ ಮುಖ್ಯ ರಸ್ತೆಗಳು, ಎಂ.ಸಿ.ಸಿ. ಎ-ಬ್ಲಾಕ್, ವಿನೋಬನಗರ 1ನೇ ಮೇನ್, ಜೂಲಿ ಕಂಪೌಂಡ್, ಮೋತಿವೀರಪ್ಪ ಶಾಲಾ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.